Home » Banned firecrackers: ದೀಪಾವಳಿಗೆ ಪಟಾಕಿ ಬ್ಯಾನ್‌- ಸರಕಾರದಿಂದ ಚಿಂತನೆ!!!

Banned firecrackers: ದೀಪಾವಳಿಗೆ ಪಟಾಕಿ ಬ್ಯಾನ್‌- ಸರಕಾರದಿಂದ ಚಿಂತನೆ!!!

1 comment
Banned firecrackers

Banned firecrackers: ರಾಜಧಾನಿ ಬೆಂಗಳೂರು ಅತ್ತಿಬೆಲೆಯಲ್ಲಿ ಕಳೆದ ಶನಿವಾರ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಒಟ್ಟು 14 ಮಂದಿ ಸಜೀವ ದಹನವಾಗಿದ್ದರೆ.ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತಕ್ಕೆ ಇಡೀ ರಾಜ್ಯವೇ ಮರುಗಿದೆ. ಘೋರ ದುರಂತದಲ್ಲಿ 14 ಮಂದಿ ಸುಟ್ಟು ಕರಕಲಾಗಿದ್ದು, ಪೋಷಕರ ಆಕ್ರಂದನ ಹೇಳತೀರದು.

ಶನಿವಾರ ಮಧ್ಯಾಹ್ನ 3:30 ರ ಸುಮಾರಿಗೆ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ 14 ಜನರು ಸಜೀವ ದಹನವಾಗಿದ್ದಾರೆ. ಮೃತರ ಕುಟುಂಬಕ್ಕೆ ಕರ್ನಾಟಕ ಸರ್ಕಾರ 5 ಲಕ್ಷ ರೂಪಾಯಿ ಹಾಗೂ ತಮಿಳುನಾಡು ಸರ್ಕಾರ 3 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

ಸದ್ಯ ಪಟಾಕಿ ದುರಂತ ಸಂಭವಿಸಿರುವ ಅತ್ತಿಬೆಲೆಯ ‘ಶ್ರೀ ಬಾಲಾಜಿ ಟ್ರೇಡರ್ಸ್’ ಮಳಿಗೆಯಲ್ಲಿ ಸಾಕಷ್ಟು ಲೋಪಗಳಿದ್ದರೂ ಅಕ್ರಮವಾಗಿ ಪರವಾನಗಿ ನೀಡಿದ್ದ ಸಂಗತಿ ಪೊಲೀಸರ ವಿಶೇಷ ತಂಡದ ತನಿಖೆಯಿಂದ ಗೊತ್ತಾಗಿದೆ. ಇದೀಗ ಘಟನೆ ಹಿನ್ನೆಲೆ ಎಚ್ಚೆತ್ತ ಸರ್ಕಾರ ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಲು (Banned firecrackers) ಚಿಂತನೆ ನಡೆಸಿದೆ ಎನ್ನಲಾಗಿದೆ.

ಮಾಹಿತಿ ಪ್ರಕಾರ, ಅತ್ತಿಬೆಲೆಯ ಬಾಲಾಜಿ ಪಟಾಕಿ ಅಂಗಡಿಗೆ ಬೆಂಕಿ ಬಿದ್ದು 14 ಮಂದಿ ಸಜೀವ ದಹನವಾಗಿದ್ದು, ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ಈ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಅಲರ್ಟ್ ಬೆಂಗಳೂರು ಜಿಲ್ಲಾಡಳಿತ ಪಟಾಕಿ ಗೋಡೌನ್ ಗಳ ಮೇಲೆ ರೇಡ್ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಈ ಬಾರಿ ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಬೇಕು, ಈ ಮೂಲಕ ಮುಂಜಾಗೃತಾ ಕ್ರಮ ಕೈಗೊಳ್ಳದ ಪಟಾಕಿ ಅಂಗಡಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಜಿಲ್ಲಾಡಳಿತ ನಡೆಸಿದ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಎಲ್ಲಾ ಕಡೆ ಸಾಧ್ಯವಾಗದಿದ್ದರೆ ಪ್ರಮುಖ ಬಡಾವಣೆಗಳಲ್ಲಿ ಪಟಾಕಿ ಬ್ಯಾನ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಡಿಜೆ ಸೌಂಡ್‌ಗೆ ಎದ್ದು, ಬಿದ್ದು ಸ್ಟೆಪ್ ಹಾಕಿದ ಯುವಕ – ಸ್ಥಳದಲ್ಲೇ ಕುಸಿದು ಹೃದಯಾಘಾತಕ್ಕೆ ಬಲಿ

You may also like

Leave a Comment