Home » Mango and Jackfruit Mela: ಇಂದಿನಿಂದ ಜೂ.5ರವರೆಗೆ ಲಾಲ್​​ಬಾಗ್​ನಲ್ಲಿ ಮಾವು, ಹಲಸಿನ ಮೇಳ : ಕೈಗೆಟಕುವ ದರದಲ್ಲಿ ಲಭ್ಯ

Mango and Jackfruit Mela: ಇಂದಿನಿಂದ ಜೂ.5ರವರೆಗೆ ಲಾಲ್​​ಬಾಗ್​ನಲ್ಲಿ ಮಾವು, ಹಲಸಿನ ಮೇಳ : ಕೈಗೆಟಕುವ ದರದಲ್ಲಿ ಲಭ್ಯ

0 comments
Mango and Jackfruit Mela

 

Mango and Jackfruit Mela: ಹಣ್ಣುಗಳ ರಾಜ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ನಳನಳಿಸುತ್ತಿದ್ದು, ಇದೀಗ ಸಿಲಿಕಾನ್‌ ಸಿಟಿ ಬೆಂಗಳೂರಿನ ಲಾಲ್​​ಬಾಗ್‌ ಎಂಟ್ರಿಕೊಟ್ಟಿದ್ದು, ಇಂದಿನಿಂದ ಜೂ.5ರವರೆಗೆ ಮಾವು, ಹಲಸಿನ ಮೇಳವನ್ನು (Mango and Jackfruit Mela) ಆಯೋಜನೆ ಮಾಡಲಾಗಿದೆ.

ತೋಟಾಗಾರಿಕೆ ಇಲಾಖೆ ವತಿಯಿಂದ ಲಾಲ್​​ಬಾಗ್​ನಲ್ಲಿ ನಡೆಯುತ್ತಿರೋ ಮಾವು, ಹಲಸಿನ ಮೇಳಕ್ಕೆ ಇಂದು ಸಚಿವ ರಾಮಲಿಂಗಾರೆಡ್ಡಿ, ಹಾಗೂ ಶಾಸಕ ಉದಯ್ ಗರುಡಾಚಾರ್​ ಉದ್ಘಾಟಿಸುವ ಮೂಲಕ ಚಾಲನೆ ನೀಡಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ಬೆಳೆದ ಮಾವಿನ ಹಣ್ಣನ್ನು ಯಾವುದೇ ಮಧ್ಯವರ್ತಿಗಳಿಲ್ಲದೇ ಮೇಳಕ್ಕೆ ತಂದು ಮಾರಾಟ ಮಾಡಲಾಗುತ್ತದೆ. ಅಲ್ಲದೇತೋಟಗಾರಿಕೆ ಇಲಾಖೆ 10% ರಿಯಾಯಿತಿ ದರ ನಿಗದಿ ಮಾಡಿದೆ, ಮೇಳದಲ್ಲಿ ಬಾದಾಮಿ, ರಸ್ಪೂರಿ, ಮಲ್ಲಿಕಾ, ಮಲ್ಗೋವಾ, ಕಾಡುಮಾವು, ಕಾಲಪಾಡು, ದಶೇರಿ, ಕೇಸರ್, ನೀಲಂ ಸೇರಿದಂತೆ ಹಲವು ಮಾವು ತಳಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಮಾವಿನ ಹಣ್ಣು ಕೆಜಿಗೆ 32 ರಿಂದ ಶುರುವಾಗಿ 215 ರೂಪಾಯಿ ವರೆಗೆ ಮಾರಾಟ ಮಾಡುತ್ತದೆ . ಹಲಸಿಗೆ ಕೆಜಿಗೆ 25 ರೂಪಾಯಿ ಇರಲಿದೆ. ರಸಪೂರಿತ ಮಾವು ಹಾಗೂ ಹಲಸಿನ ಖರೀದಿಸಬೇಕೆಂದ್ರೆ ನೀವು ಒಮ್ಮೆ ಭೇಟಿ ನೀಡಿ..

ಇದನ್ನೂ ಓದಿ: Aamir Khan 3rd Marriage: ನಟಿ ಫಾತಿಮಾ ಜತೆ ಆಮಿರ್​ ಖಾನ್​ ಮೂರನೇ ಮದುವೆ ; ಟ್ವೀಟ್ ಮಾಡಿ ಸನ್ಸೇಷನ್ ಸೃಷ್ಟಿಸಿದ ಕಮಾಲ್!!

You may also like

Leave a Comment