Home » ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆಯಿಂದ ರೋಗಿಗಳ ನರಕಯಾತನೆ!!|ಒಂದೇ ಬೆಡ್ನಲ್ಲಿ ಶವದ ಜೊತೆ ರೋಗಿಯನ್ನು ಮಲಗಿಸಿ ಚಿಕಿತ್ಸೆ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆಯಿಂದ ರೋಗಿಗಳ ನರಕಯಾತನೆ!!|ಒಂದೇ ಬೆಡ್ನಲ್ಲಿ ಶವದ ಜೊತೆ ರೋಗಿಯನ್ನು ಮಲಗಿಸಿ ಚಿಕಿತ್ಸೆ

0 comments

ಸಿಲಿಕಾನ್ ಸಿಟಿ ಬೆಂಗಳೂರಿನ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಜನ ಸಾಮಾನ್ಯರು ಆಸ್ಪತ್ರೆಯ ಅವ್ಯವಸ್ಥೆಯಿಂದ ಪರದಾಡುತ್ತಿದ್ದಾರೆ.

ರಾಜ್ಯದ ರಾಜಧಾನಿಯಲ್ಲಿರುವ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ.ವಿಕ್ಟೋರಿಯಾ ಆಸ್ಪತ್ರೆ ಮೃತದೇಹಗಳ ಪಕ್ಕದಲ್ಲೇ ಒಂದೇ ಬೆಡ್ನಲ್ಲಿ ಶವದ ಜೊತೆ ರೋಗಿಯನ್ನು ಮಲಗಿಸಿ,ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಇನ್ನು ಸ್ಟ್ರೆಚರ್ ಇಲ್ಲದ ಹಿನ್ನೆಲೆ ಆಸ್ಪತ್ರೆ ಮೆಟ್ಟಿಲುಗಳ ಮೇಲೆ ರೋಗಿಯೊಬ್ಬರು ತೆವಳುತ್ತಾ ಸಾಗಿದ್ದಾರೆ.’ನನಗೆ ಈ ಆಸ್ಪತ್ರೆ ಬೇಡ’ ಅಂತ ತೆವಳುತ್ತಲೇ ರೋಗಿ ಹೊರ ಬಂದಿದ್ದಾರೆ. ಮಾತ್ರವಲ್ಲದೇ ಮಳೆಯ ಮಧ್ಯೆ ಸಿರೀಯಸ್ ಆಗಿರುವ ರೋಗಿಯನ್ನು ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಐಸಿಯು ಬೆಡ್ಗಳ ಕೊರತೆ ಹಿನ್ನೆಲೆ ಆಂಬುಲೆನ್ಸ್ನಲ್ಲಿಯೇ ರೋಗಿಗಳು ಪರದಾಡುತ್ತಿರುವುದು ಬಯಲಾಗಿದೆ.

ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಬಗ್ಗೆ ಸಂಬಂಧಿಸಿದವರ ಜೊತೆ ಚರ್ಚೆ ಮಾಡಿದ್ದೇನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಸಮಸ್ಯೆ ಬಗೆಹರಿಯುತ್ತೆ ಎಂದು ತಿಳಿಸಿದ್ದಾರೆ.

You may also like

Leave a Comment