Home » ಮಣಿಪಾಲ: ಸರ್ವೀಸ್ ಮುಗಿಸಿದ 50 ವರ್ಷ ಹಿಂದಿನ ನೀರಿನ ಟ್ಯಾಂಕ್ ಧರಾಶಾಹಿ!

ಮಣಿಪಾಲ: ಸರ್ವೀಸ್ ಮುಗಿಸಿದ 50 ವರ್ಷ ಹಿಂದಿನ ನೀರಿನ ಟ್ಯಾಂಕ್ ಧರಾಶಾಹಿ!

0 comments

ಮಣಿಪಾಲ: ಮಣಿಪಾಲದ ಕೆನರಾ ಬ್ಯಾಂಕ್‌ ಪ್ರಧಾನ ಕಚೇರಿ ಸರ್ಕಲ್ ಬಳಿ ಮೂರು ರಸ್ತೆಗಳು ಜೋಡಿಯಾಗುವ ಬಳಿ ಇದ್ದ ಸುಮಾರು ಐದು ದಶಕಗಳ ಹಿಂದಿನ ಕುಡಿಯುವ ನೀರಿನ ಟ್ಯಾಂಕ್ ತನ್ನ ಸರ್ವಿಸ್ ಮುಗಿಸಿ ಇವತ್ತು ಧರಾಶಾಹಿಯಾಗಿದೆ. ಈ ಟ್ಯಾಂಕ್ ಅನ್ನು, ಇಂದು ಮಂಗಳವಾರ (ಏ.08) ಕೆಡವಲಾಗಿದೆ.

ಸುಮಾರು 50 ವರ್ಷಗಳ ಕಾಲ ಮಣಿಪಾಲದ ಆಸುಪಾಸಿನ ಜನರಿಗೆ ನೀರುಣಿಸಿದ್ದ, ಈಗ ಶಿಥಿಲಾವಸ್ಥೆಯಲ್ಲಿದ್ದ ಈ ನೀರಿನ ಟ್ಯಾಂಕ್ ಅನ್ನು ಉಡುಪಿ ನಗರಸಭೆ ವತಿಯಿಂದ ಕ್ರೇನ್ ಬಳಸಿ ನೆಲಸಮಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿ, ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೆನರಾ ಬ್ಯಾಂಕ್‌ ಸರ್ಕಲ್ ಸುತ್ತ ಮುತ್ತ, ಆರ್ ಎಸ್ ಬಿ ಭವನದ ಕೂಡಿ ರಸ್ತೆ ಹಾಗೂ ಟೈಗರ್ ಸರ್ಕಲ್ ಮಾರ್ಗದಲ್ಲಿ ತೆರಳಲಿರುವ ವಾಹನಗಳ ಸಂಚಾರವನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೆ ನಿರ್ಬಂಧಿಸಲಾಗಿತ್ತು.

You may also like