Home » Karkala: ನಕ್ಸಲ್ ವಿಕ್ರಂ ಗೌಡನ ಮೃತ ದೇಹ ಕೊಂಡೊಯ್ಯುತ್ತಿದ್ದ ಅಂಬುಲೆನ್ಸ್ ಪಲ್ಟಿ !!

Karkala: ನಕ್ಸಲ್ ವಿಕ್ರಂ ಗೌಡನ ಮೃತ ದೇಹ ಕೊಂಡೊಯ್ಯುತ್ತಿದ್ದ ಅಂಬುಲೆನ್ಸ್ ಪಲ್ಟಿ !!

0 comments

Karkala: ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದ. ಇದೀಗ ಮರಣೋತ್ತರ ಪರೀಕ್ಷೆ ಬಳಿಕ ಆತನ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಆದ್ದರಿಂದ ವಿಕ್ರಂ ಗೌಡನ ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ಪಲ್ಟಿಯಾಗಿದೆ.

ಹೌದು ಮರಳುತ್ತರ ಪರೀಕ್ಷೆ ಬಳಿಕ ವಿಕ್ರಂ ಗೌಡನ ಶವವನ್ನು ಕುಟುಂಬಸ್ಥರಿಗೆ ಸಾಂತರಿಸಲಾಯಿತು ಗ್ರಾಮಕ್ಕೆ ವಿಕ್ರಂ ಗೌಡನ ಶವ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಶವ ಸಾಗಣೆ ವೇಳೆ ಆಂಬುಲೆನ್ಸ್ ಪಲ್ಟಿಯಾಗಿದೆ.

ವೇಗವಾಗಿ ಹೋಗುತ್ತಿದ್ದ ಆಯಂಬುಲೆನ್ಸ್​​ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಹೋಗಿದೆ. ರಸ್ತೆ ಬದಿಯಲ್ಲಿದ್ದ ಗುಡಿಯೊಳೊಗೆ ವಾಲಿಕೊಂಡು ನಿಂತಿದೆ. ಕೂಡಲೆ ಸ್ಥಳದಲ್ಲಿದ್ದ ಜನರು ಧಾವಿಸಿ, ಆಯಂಬುಲೆನ್ಸ್​ ಅನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ, ಆಯಂಬುಲೆನ್ಸ್​ ವಿಕ್ರಂಗೌಡ ಮೃತದೇಹ ಹೊತ್ತು ಸಾಗಿದೆ.

ಘಟನೆ ಹಿನ್ನೆಲೆ?
ಹೆಬ್ರಿ ಪರಿಸರದಲ್ಲಿ ಕಳೆದ ಕೆಲದಿನಗಳಿಂದ ನಕ್ಸಲ್ ಓಡಾಟ ವರದಿಯಾಗಿದ್ದು, ಎಎನ್ ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು.ಸೋಮವಾರ ತಡ ಒಂದು ಗಂಟೆ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತ ಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಎಎನ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ.

ಈ ವೇಳೆ ದಾಳಿ-ಪ್ರತಿದಾಳಿ ನಡೆದಿದ್ದು, ಪೊಲೀಸರ ಗುಂಡೇಟಿಗೆ ವಿಕ್ರಂ ಗೌಡ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಉಳಿದ ನಾಲ್ವರು ಕಾಡಿನ ಹಾದಿಯಲ್ಲಿ ಪರಾರಿಯಾಗಿದ್ದಾರೆ. ಎಎನ್ ಎಫ್ ಕೂಂಬಿಂಗ್ ಮುಂದುವರಿಸಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸುತ್ತಿದೆಎಂದು ಎ‌ಎನ್‌ಎಫ್ ಮೂಲಗಳು ತಿಳಿಸಿವೆ.

You may also like

Leave a Comment