Home » ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದ ಎರಡೂವರೆ ವರ್ಷದ ಮಗು

ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದ ಎರಡೂವರೆ ವರ್ಷದ ಮಗು

0 comments

ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದ ಘಟನೆ ಹೆಬ್ರಿ ತಾಲೂಕಿನಲ್ಲಿ ನಡೆದಿದೆ.

ಗಾಯಗೊಂಡ ಮಗುವನ್ನು ಶಿವಪುರ ಗ್ರಾಮದ ಮುಳ್ಳುಗುಡ್ಡೆಯ ಶಕುಂತಲಾ ಹಾಗೂ ಕೃಷ್ಣ ದಂಪತಿಗಳು ಎರಡೂವರೆ ವರ್ಷ ಪ್ರಾಯದ ಮಗು ಸಾಕ್ಷಿ ಎಂದು ಗುರುತಿಸಲಾಗಿದೆ.

ದಂಪತಿಗಳಿಗೆ ಎರಡೂವರೆ ವರ್ಷ ಪ್ರಾಯದ ಸಾಕ್ಷಿ ಹಾಗೂ 6 ತಿಂಗಳ ಹೆಣ್ಣು ಮಗುವಿದ್ದು , ಜನತಾ ಕಾಲೋನಿ ಎಂಬಲ್ಲಿ ವಾಸವಾಗಿದ್ದರು. ಮೇ.17ರಂದು ಕಾರ್ಯಕ್ರಮವೊಂದರ ನಿಮಿತ್ತ ಇವರ ಮನೆಗೆ ಸಂಬಂಧಿ ರಾಜು ಎಂಬುವವರು ಬಂದಿದ್ದರು. ಇವರು ರಾತ್ರಿ 8:00 ಗಂಟೆಗೆ ಮನೆಯ ಛಾವಡಿಯಲ್ಲಿ ಸಾಕ್ಷಿಯನ್ನು ಎತ್ತಿ ಆಡಿಸುತ್ತಿದ್ದರು.

ಈ ವೇಳೆ ಏಕಾಏಕಿ ಕೈಯಿಂದ ಜಾರಿದ ಮಗು ನೆಲಕ್ಕೆ ಬಿದ್ದಿದ್ದು, ಮಗುವಿನ ಎಡಕಿವಿಯ ಬಳಿ ತೀವ್ರವಾದ ಗಾಯವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment