Home » ಉಡುಪಿ ಜಿಲ್ಲೆಯ ಕ್ಷೇತ್ರಗಳ ಮತ ಎಣಿಕೆಗೆ ಕೌಂಟ್ ಡೌನ್, ರಸ್ತೆ ಸಂಚಾರದಲ್ಲಿ ಬದಲಿ ವ್ಯವಸ್ಥೆ

ಉಡುಪಿ ಜಿಲ್ಲೆಯ ಕ್ಷೇತ್ರಗಳ ಮತ ಎಣಿಕೆಗೆ ಕೌಂಟ್ ಡೌನ್, ರಸ್ತೆ ಸಂಚಾರದಲ್ಲಿ ಬದಲಿ ವ್ಯವಸ್ಥೆ

by Mallika
0 comments

ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಇಂದು ಸೈಂಟ್‌ ಸಿಸಿಲೀಸ್‌ ಶಾಲೆಯ ಆವರಣದ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ. ಅದರ ಸುತ್ತಲಿನ 100 ಮೀ. ಪ್ರದೇಶ ನಿಷೇಧಿತ ಪ್ರದೇಶವಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ.

ಬೆಳಗ್ಗೆ 7ರಿಂದ 6ರ ವರೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬದಲಿ ವ್ಯವಸ್ಥೆ ಮಾಡಲಾಗಿದೆ:
– ಬ್ರಹ್ಮಗಿರಿ ಜಂಕ್ಷನ್‌ನಿಂದ ಜೋಡುಕಟ್ಟೆವರೆಗೆ ದ್ವಿಪಥ ಸಂಚಾರ ರಸ್ತೆಯ ಪೈಕಿ ಏಕಪಥವನ್ನು ಮುಚ್ಚಿದ್ದು, ಅಜ್ಜರಕಾಡು ಸಾರ್ವಜನಿಕ ಆಸ್ಪತ್ರೆಯ ಕಡೆ ಇರುವ ರಸ್ತೆಯಲ್ಲಿ ಸಂಚರಿಸಬಹುದು.

– ಮಲ್ಪೆ, ಕುಂದಾಪುರ, ಕಿದಿಯೂರು ಕಡೆಯಿಂದ ಅಂಬಲಪಾಡಿ ಬ್ರಹ್ಮಗಿರಿ ಮೂಲಕ ಉಡುಪಿ ಕಡೆಗೆ ಹೋಗುವ ಎಲ್ಲ ಬಸ್‌ಗಳು ಕರಾವಳಿ ಬನ್ನಂಜೆ ಸಿಟಿ ಬಸ್‌ ನಿಲ್ದಾಣದ ಮೂಲಕ ಬಸ್‌ ನಿಲ್ದಾಣ ತಲುಪಬೇಕು.

ಪೊಲೀಸ್‌ ಭದ್ರತೆ
ಮತ ಎಣಿಕೆ ನಡೆಯುವ ಭಾಗದಲ್ಲಿ ಸಿಆರ್‌ಪಿಎಫ್ ಪಡೆಯ ಪಿಎಸ್‌ಐ, ಸಿಬಂದಿ, ಕೆಎಸ್‌ಆರ್‌ಪಿ ತುಕಡಿ, 5 ಮಂದಿ ಸಬ್‌ ಇನ್‌ಸ್ಪೆಕ್ಟರ್‌ಗಳು, 25 ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿದೆ. ಡಿವೈಎಸ್‌ಪಿ ಹಾಗೂ ಇನ್‌ಸ್ಪೆಕ್ಟರ್‌ಗಳು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಲೈವ್ ಅಪ್ಡೇಟ್‌ ‌

ಬೆಂಗಳೂರು : ರಾಜ ವಿಧಾನಸಭಾ ಚುನಾವಣೆಯಲ್ಲಿ ಎಳ್ಅ ಕ್ಷೇತ್ರಗಳ ಲೈವ್ ಅಪ್ಡೇಟ್‌ ಚುನಾವಣ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು,ಈ ಕೆಳಗಿನ ಲಿಂಕ್ ಬಳಸಿ ಫಲಿತಾಂಶ ನೋಡಬಹುದು.

https://results.eci.gov.in/

You may also like

Leave a Comment