Home » Udupi: ಉಡುಪಿ ಗರುಡಗ್ಯಾಂಗ್‌ಗೆ ಉಪ್ಪಿನಂಗಡಿ ಯುವತಿಯಿಂದ ಹಣಕಾಸಿನ ನೆರವು; ಬಂಧನ

Udupi: ಉಡುಪಿ ಗರುಡಗ್ಯಾಂಗ್‌ಗೆ ಉಪ್ಪಿನಂಗಡಿ ಯುವತಿಯಿಂದ ಹಣಕಾಸಿನ ನೆರವು; ಬಂಧನ

0 comments
Udupi

Udupi: ಕಾಪು ಗರುಡ ಗ್ಯಾಂಗ್‌ ಸದಸ್ಯರಿಗೆ ಹಣದ ನೆರವು ನೀಡಿದ ಕಾರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಆರೋಪಿಯೊಬ್ಬನ ಗೆಳತಿಯನ್ನು ಉಡುಪಿ ಪೊಲೀಸರು ಬಂಧನ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕರ್ವೇಲು, ಬಾನೊಟ್ಟು ನಿವಾಸಿ ಝಕಾರಿಯಾ ಪತ್ನಿ ಸಫಾರ ಯಾನೆ ಸಾಜಿದ (21) ಎಂಬುವರನ್ನು ಬಂಧನ ಮಾಡಲಾಗಿದೆ.

ಆರ್ಥಿಕ ನೆರವು, ಆಶ್ರಯ ವ್ಯವಸ್ಥೆಯನ್ನು ಸಫಾರ ಅವರು ಗರುಡ ಗ್ಯಾಂಗ್‌ ಸದಸ್ಯರಿಗೆ ಮಾಡಿಕೊಟ್ಟಿದ್ದರು. ಜೊತೆಗೆ ಮೊಬೈಲ್‌ ಫೋನ್‌ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪ ಸಫಾರ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾದಂತ ಡಾ.ಅರುಣ್‌ ಕೆ. ತಿಳಿಸಿದ್ದಾರೆ.

ಮಂಗಳೂರಿನ ಕಾರಾಗೃಹದಲ್ಲಿ ಸಫಾರರನ್ನು ಇರಿಸಲಾಗಿದೆ.

BJP MP Kangana: ಸಂಸದೆ, ಚಿತ್ರ ನಟಿ ಕಂಗನಾ ರಾಣಾವತ್‌ ರಿಂದ ಸಾರ್ವಜನಿಕರಿಗೆ ಹೊಸ ರೂಲ್ಸ್‌ ಜಾರಿ

You may also like

Leave a Comment