Home » ಕುಂದಾಪುರದ ಖ್ಯಾತ ಉದ್ಯಮಿ ಕಟ್ಟೆ ಭೋಜಣ್ಣ ಸೂಸೈಡ್ ಪ್ರಕರಣ..! ಗೋಲ್ಡ್ ಜ್ಯುವೆಲರ್ಸ್ ಮಾಲೀಕ ಗಣೇಶ್ ಶೆಟ್ಟಿ ಮೊಳಹಳ್ಳಿ ಅರೆಸ್ಟ್..!

ಕುಂದಾಪುರದ ಖ್ಯಾತ ಉದ್ಯಮಿ ಕಟ್ಟೆ ಭೋಜಣ್ಣ ಸೂಸೈಡ್ ಪ್ರಕರಣ..! ಗೋಲ್ಡ್ ಜ್ಯುವೆಲರ್ಸ್ ಮಾಲೀಕ ಗಣೇಶ್ ಶೆಟ್ಟಿ ಮೊಳಹಳ್ಳಿ ಅರೆಸ್ಟ್..!

0 comments

ಉಡುಪಿ: 2 ದಿನಗಳ ಹಿಂದೆ ಕುಂದಾಪುರದ ಖ್ಯಾತ ಉದ್ಯಮಿ ಕಟ್ಟೆ ಭೋಜಣ್ಣ ಸೂಸೈಡ್ ಮಾಡಿದ ದುರದೃಷ್ಟಕರ ಘಟನೆಯೊಂದು ನಡೆದಿತ್ತು. ರಿವಾಲ್ವರ್ ಮೂಲಕ ಗುಂಡು ಹಾರಿಸಿಕೊಂಡಿದ್ದರು.

ಕುಂದಾಪುರ ಉದ್ಯಮಿ ಕಟ್ಟೆ ಭೋಜಣ್ಣ ಸೂಸೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಲ್ಡ್ ಜ್ಯುವೆಲರ್ಸ್ ಮಾಲೀಕ ಗಣೇಶ್ ಶೆಟ್ಟಿ ಮೊಳಹಳ್ಳಿ ಅವರನ್ನು ಈಗ ಅರೆಸ್ಟ್ ಮಾಡಲಾಗಿದೆ.

ಡೆತ್‌ನೋಟ್‌ನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಮೋಸದ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಗಣೇಶ್ ಶೆಟ್ಟಿ 3.34 ಕೋಟಿ ನಗದು, 5 ಕೆಜಿ ಬಂಗಾರ ಪಡೆದಿದ್ದ ಆರೋಪ ದ ಹಿನ್ನೆಲೆ ಭೋಜಣ್ಣ ಪುತ್ರ ಸುಧೀಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆ ಸಾವಿಗೆ ಗಣೇಶ್ ಶೆಟ್ಟಿ, ಇಸ್ಮಾಯಿಲ್ ಪ್ರಚೋದನೆ ಕಾರಣ ಎಂದು ದೂರು ನೀಡಲಾಗಿದ್ದು, ಕುಂದಾಪುರ ಪೊಲೀಸರು ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಗಣೇಶ್ ಶೆಟ್ಟಿ ಯನ್ನು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿ ಹಾಜರ್ ಆಗಿದ್ದು, ಮೇ 30ರವರೆಗೆ ಗಣೇಶ್ ಶೆಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಬ್ಬ ಆರೋಪಿ ಬ್ರೋಕರ್ ಮಂಗಳೂರು ಇಸ್ಮಾಯಿಲ್‌ಗೆ ಶೋಧ ನಡೆಸಲಾಗುತ್ತಿದೆ.

You may also like

Leave a Comment