Home » Udupi: ಇನ್ಸ್ಟಾಗ್ರಾಮ್ ಪೇಜ್ ನಿಂದ ಬಯಲಾಯ್ತು ಅನ್ಯಧರ್ಮದ ಯುವಕರ ಖತರ್ನಾಕ್ ಪ್ಲಾನ್, ಹಿಂದೂ ಯುವತಿಯರೇ ಟಾರ್ಗೆಟ್ !

Udupi: ಇನ್ಸ್ಟಾಗ್ರಾಮ್ ಪೇಜ್ ನಿಂದ ಬಯಲಾಯ್ತು ಅನ್ಯಧರ್ಮದ ಯುವಕರ ಖತರ್ನಾಕ್ ಪ್ಲಾನ್, ಹಿಂದೂ ಯುವತಿಯರೇ ಟಾರ್ಗೆಟ್ !

0 comments
Udupi

Udupi :ಲವ್ ಜಿಹಾದ್ ಮೂಲಕ ಅನ್ಯಧರ್ಮದ ಯುವಕರು ಹಿಂದೂ ಯುವತಿಯರನ್ನು ಮತಾಂತರ ನಡೆಸಿ ಬಳಿಕ ಕಿರುಕುಳ, ಕೊಲೆ ಯಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು ಈಗಾಗಲೇ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅಲ್ಲಲ್ಲಿ ಕೆಲವೊಂದು ಪ್ರಕರಣಗಳು ನಡೆಯುತ್ತಲೇ ಇದೆ ಎನ್ನುವುದಕ್ಕೆ ಜಿಲ್ಲೆಯ ಈ ಘಟನೆಯು ಸಾಕ್ಷಿಯಂತಿದೆ.

ಹಿಂದೂ ಧರ್ಮ ಎನ್ನುವ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಜಿಲ್ಲೆಯ ಕಾರ್ಕಳ ಮೂಲದ ಮುಸ್ಲಿಂ ಯುವಕರಿಬ್ಬರ ಮೇಲೆ ಗಂಭೀರ ಆರೋಪ ವ್ಯಕ್ತವಾಗಿದ್ದು, ಹಿಂದೂ ಯುವತಿಯರನ್ನು ಪುಸಲಾಯಿಸಿ ಮತಾಂತರ, ಮದುವೆ, ರೆಸಾರ್ಟ್ ನಲ್ಲಿ ಸ್ಟೇ ಮುಂತಾದ ವಿಚಾರಗಳ ಸಹಿತ ಫಾರುಕ್-ಶಾರುಕ್ ಎಂಬಿಬ್ಬರ ಕರ್ಮಕಾಂಡ ಬಯಲಾಗಿದೆ.

ವಿವರ:ಇಲ್ಲಿನ ಜಿಮ್ ಒಂದಕ್ಕೆ ಬರುವ ಹಿಂದೂ ಯುವತಿಯರ ಸಂಪರ್ಕ ಬೆಳೆಸುತ್ತಿರುವ ಶಾರುಕ್ ಎಂಬಾತ ಅವರೊಂದಿಗೆ ಸುತ್ತಾಟ ನಡೆಸುವ ಮೂಲಕ ತನ್ನ ಅಸಲಿ ಆಟ ಶುರುಮಾಡಿದ್ದು, ಈ ಹಿಂದೊಮ್ಮೆ ಓರ್ವ ಹಿಂದೂ ಯುವತಿಯೊಂದಿಗೆ ಸ್ಥಳೀಯ ರೆಸಾರ್ಟ್ ಒಂದರಲ್ಲಿ ಸ್ಟೇ ಆಗಿದ್ದ ಎನ್ನಲಾಗಿದೆ. ಅಲ್ಲದೇ ಜಿಮ್ ಗೆ ಬರುತ್ತಿದ್ದ ಓರ್ವ ವಿವಾಹಿತ ಮಹಿಳೆಯೊಂದಿಗೆ ಸಲುಗೆ ಬೆಳೆಸಿದ ಪರಿಣಾಮ ವಿಚಾರ ಆಕೆಯ ಪತಿಯ ಗಮನಕ್ಕೆ ಬಂದಿದ್ದು, ಸದ್ಯ ಆ ಪ್ರಕರಣ ವಿಚ್ಛೇದನ ಮಟ್ಟಕ್ಕೆ ತಲುಪಿದೆ ಎನ್ನುವ ಗಂಭೀರ ವಿಚಾರಗಳೂ ಪೇಜ್ ನಲ್ಲಿ ಬಹಿರಂಗವಾಗಿದೆ.

ಮೂಲತಃ ಬೆಳ್ತಂಗಡಿ ಮೂಲದವನಾದ ಶಾರುಕ್, ಕಾರ್ಕಳ ನಿಟ್ಟೆಯಲ್ಲಿರುವ ಫಾರೂಕ್ ಎಂಬಾತನ ಕ್ರಷರ್ ನಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಫಾರುಕ್ ನ ಬೆಂಬಲದಿಂದ ಇಷ್ಟೆಲ್ಲಾ ಅನಾಚಾರ ನಡೆಯುತ್ತಿದೆ ಎನ್ನಲಾಗಿದ್ದು, ಹಿಂದೂ ದೇವಾಲಯಗಳಲ್ಲಿ ಮುಸ್ಲಿಂರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಎನ್ನುವ ವಿಚಾರದಲ್ಲಿ ಈ ಹಿಂದೆ ಹಿಂದೂ ಮುಖಾಂಡರಿಗೂ ಇವರಿಬ್ಬರು ಬೆದರಿಸಿದ್ದರು ಎಂದು ಹೇಳಲಾಗಿದೆ.

ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದ್ದು,ಕಾರ್ಕಳದಲ್ಲಿ ಮುಸ್ಲಿಂ ಯುವಕರ ಲವ್ ಜಿಹಾದ್,ಮತಾಂತರ ಪ್ರಕರಣಕ್ಕೆ ಮಟ್ಟ ಹಾಕುವ ಬಗ್ಗೆ ಮಾತುಕತೆಗಳು ನಡೆದಿವೆಯಂತೆ.ಇವರಿಬ್ಬರ ಬಗ್ಗೆ ಕೇಳಿ ಬಂದಿರುವ ಆರೋಪ ಸದ್ಯ ಹಿಂದೂ ಯುವಕರ ನಿದ್ದೆಗೆಡಿಸಿದ್ದು,ಸುತ್ತಾಟದ ಬಗ್ಗೆ ಹದ್ದಿನ ಕಣ್ಣಿರಿಸಲಾಗಿದೆ.

You may also like

Leave a Comment