ಉಡುಪಿ : ಬಾಡಿಗೆ ಕೊಠಡಿ ನೀಡಿಲ್ಲ ಎನ್ನುವ ಉದ್ದೇಶವಿರಿಸಿಕೊಂಡು ಮೂರು ಮಂದಿ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಕಾವೆರಡ್ಕದಲ್ಲಿ ನಡೆದಿದೆ.
ಸುಮಂತ್ ಶೆಟ್ಟಿ ಎಂಬವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜಗೋಳಿಯ ಸುಮಂತ್ ಶೆಟ್ಟಿ ಕಾರ್ಕಳ ಕಸಬಾ ಗ್ರಾಮದ ಕಾವೆರಡ್ಕ ನಿವಾಸಿ ವಸಂತಿ ಶೆಟ್ಟಿ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿ ಮಗಳ ಬಗ್ಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ.
ವಸಂತಿಯವರ ಮೈಮೇಲೆ ಕೈಹಾಕಿ ಮಾನಭಂಗವುಂಟು ಮಾಡಿ ಪುತ್ರಿ, ಗಂಡನಿಗೆ ಹಲ್ಲೆ ನಡೆಸಿದರು. ವಾರದ ಹಿಂದೆ ವಸಂತಿ ಶೆಟ್ಟಿ ಅವರ ಇನ್ನೋರ್ವ ಸಂಬಂಧಿ ರಾಜೇಶ್ ಶೆಟ್ಟಿ ಅವರು ಬಾಡಿಗೆಗೆ ರೂಂ ಕೊಟ್ಟಿರುವುದಿಲ್ಲ ಎನ್ನುವ ಕಾರಣಕ್ಕೆ ಸುಮಂತ್ ಶೆಟ್ಟಿ ಗಲಾಟೆ ಎಬ್ಬಿಸಿ ಹಲ್ಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.