Home » ಉಡುಪಿ | ಸಿಗರೇಟು ಕೇಳುವ ನೆಪದಲ್ಲಿ ಅಂಗಡಿ ಮಾಲೀಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಸ್ಕೇಪ್ ಮಾಡಿದ ಕಳ್ಳ !!

ಉಡುಪಿ | ಸಿಗರೇಟು ಕೇಳುವ ನೆಪದಲ್ಲಿ ಅಂಗಡಿ ಮಾಲೀಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಸ್ಕೇಪ್ ಮಾಡಿದ ಕಳ್ಳ !!

0 comments

ಉಡುಪಿ:ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಎಸ್ಕೇಪ್ ಮಾಡಿದ ಘಟನೆ ಉಡುಪಿಯ ಗುಂಡುಪಾದೆ ಪೆರ್ಣಂಕಿಲ ಗ್ರಾಮದಲ್ಲಿರುವ ಕಲ್ಯಾಣಿ ಜನರಲ್ ಸ್ಟೋರ್‌ನಲ್ಲಿ ನಡೆದಿದೆ.

ರಾಮಣ್ಣ ಜಿ, ನಾಯಕ್ ಎಂಬುವವರು ಕಲ್ಯಾಣಿ ಜನರಲ್ ಸ್ಟೋರ್ ಎಂಬ ದಿನಸಿ ಅಂಗಡಿಯ ಮಾಲೀಕರಗಿದ್ದು,ಖದೀಮ ಗ್ರಾಹಕರಂತೆ ಬಂದು ಸಿಗರೇಟ್ ನೀಡುವಂತೆ ಕೇಳಿಕೊಂಡಿದ್ದಾನೆ. ಸಿಗರೇಟ್ ನೀಡುವಾಗ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 2 ರಿಂದ 16 ಗ್ರಾಮ್ ತೂಕದ ಚಿನ್ನದ ಸರವನ್ನು ತೆಗೆದಿದ್ದಾನೆ.

ಎಲ್ಲದಕ್ಕೂ ಮೊದಲೇ ಹೊಂಚು ಹಾಕಿದ್ದ ಈತ ಇನ್ನೋರ್ವ ವ್ಯಕ್ತಿಯನ್ನು ಜೊತೆಗೆ ಕರೆ ತಂದಿದ್ದ.ಈತ ಕುತ್ತಿಗೆಯಿಂದ ಸರವನ್ನು ಎಳೆದುಕೊಂಡು ರಭಸದಿಂದ ಓಡಿ ಹೋಗಿ , ಮೊದಲೇ ಅಂಗಡಿಯ ಮುಂಭಾಗ ಸ್ವಲ್ಪ ದೂರದಲ್ಲಿ ಇನ್ನೊರ್ವ ವ್ಯಕ್ತಿಯನ್ನು ಚಾಲನಾ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದ. ಬಳಿಕ ಮೋಟಾರ್ ಸೈಕಲ್‌ನಲ್ಲಿ ಕುಳಿತುಕೊಂಡು ಅತಿವೇಗವಾಗಿ ಮರ್ಣೆ ಅಲೆವೂರು ಕಡೆ ಹೋಗಿದ್ದಾನೆ.

ಅವರ ಬೈಕ್ ಗೆ ಹಿಂಬದಿಯಲ್ಲಿ ನಂಬರ್‌ಪ್ಲೇಟ್ ಇರಲಿಲ್ಲ ಎಂದು ಅಂಗಡಿಯವರಾದ ರಾಮಣ್ಣ ಅವರು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

You may also like

Leave a Comment