Home » ತುಳುನಾಡಲ್ಲಿ ದೈವವನ್ನೇ ನಂಬಿಕೊಂಡು ಬಂದ ಭಕ್ತನ ಮನೆಯಲ್ಲೇ ಕಳ್ಳತನ !! | ದಾರಿ ತೋಚದೆ ಧೂಮಾವತಿ ಮೊರೆ ಹೋದ ಮನೆ ಯಜಮಾನನಿಗೆ ಎದುರಾಯಿತು ದೈವ ಪವಾಡ !!

ತುಳುನಾಡಲ್ಲಿ ದೈವವನ್ನೇ ನಂಬಿಕೊಂಡು ಬಂದ ಭಕ್ತನ ಮನೆಯಲ್ಲೇ ಕಳ್ಳತನ !! | ದಾರಿ ತೋಚದೆ ಧೂಮಾವತಿ ಮೊರೆ ಹೋದ ಮನೆ ಯಜಮಾನನಿಗೆ ಎದುರಾಯಿತು ದೈವ ಪವಾಡ !!

0 comments

ಉಡುಪಿ :ತುಳುನಾಡು ಎಂದ ಕೂಡಲೆ ಯೋಚನೆಗೆ ಬರುವುದು ಹಿಂದಿನಿಂದಲೂ ಆರಾಧಿಸಿಕೊಂಡು ಬಂದ ದೈವಗಳು. ಅದೇನೇ ಸಂಕಷ್ಟ ಎದುರಾದರೂ ಒಮ್ಮೆ ದೈವಗಳನ್ನು ನೆನೆದರೆ ಸಾಕು, ನಮ್ಮ ಕಷ್ಟಗಳೆಲ್ಲ ಪರಿಹಾರವಾದಂತೆ.ಅದೆಷ್ಟೋ ಕಾರ್ಣಿಕ ಶಕ್ತಿಗಳನ್ನು ಹೊಂದಿದ ಈ ಕರಾವಳಿ ಸಾವಿರಾರು ಭಕ್ತರ ನಂಬಿಕೆಯನ್ನು ಉಳಿಸಿದೆ.

ಇದೇ ರೀತಿ ಉಡುಪಿಯ ದೊಡ್ಡಣಗುಡ್ಡೆ ಗುಂಡಿಬೈಲು ಪಂಚ ಧೂಮಾವತಿ ದೈವಸ್ಥಾನದ ಪಕ್ಕದಲ್ಲಿ ಕಳ್ಳತನ ನಡೆದಿದ್ದು,ದೈವಸ್ತಾನದ ಹಿಂಬದಿ ಇರುವ ಬಾಬುರಾವ್ ಆಚಾರ್ಯರವರ ಮನೆಯ ಚಿನ್ನಾಭರಣ ಕಳವಾಗಿತ್ತು.
ಆಗ ದೈವವನ್ನೇ ನಂಬಿಕೊಂಡು ಬಂದ ಬಾಬುರಾವ್ ಪಂಚ ಧೂಮಾವತಿ ದೈವದ ಮೊರೆ ಹೋಗಿದ್ದರು.

ಈ ಘಟನೆ ನಡೆದ ಕೇವಲ ಎರಡು ದಿನದಲ್ಲಿ ಕಳ್ಳರು ಸಿಕ್ಕಿಬಿದ್ದಿದ್ದು ಚಿನ್ನಾಭರಣವು ಮತ್ತೆ ಅವರ ಕೈ ಸೇರುವಂತಾಗಿದೆ. ಕಳ್ಳರು ಮರದ ಅಡಿಯಲ್ಲಿ ಗಂಟುಕಟ್ಟೆ ಇಟ್ಟಿದ್ದು,ವಿಚಾರಣೆಯ ವೇಳೆ ಸತ್ಯವನ್ನು ಬಾಯಿ ಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment