Udupi murder case : ನೇಜಾರುವಿನಲ್ಲಿ ನಡೆದಿರುವ ಮೊಹಮ್ಮದ್ ನೂರ್ ಎಂಬುವವರ ಮನೆಗೆ ನುಗ್ಗಿ ಕುಟುಂಬದ ನಾಲ್ವರು ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ(Udupi murder case ) ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು 36 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕೇವಲ 15 ನಿಮಿಷದಲ್ಲಿ ನಾಲ್ಕು ಕೊಲೆ ಮಾಡಿದರೂ, ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿದ ತನಿಖಾ ತಂಡ ಬೆಳಗಾಗಿ ಜಿಲ್ಲೆಯ ಕುಡಚಿಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ಪೊಲೀಸ್ ವಶದಲ್ಲಿರುವ ಆರೋಪಿ ಪ್ರವೀಣ್ ಚೌಗಲೆ (35) ಮಂಗಳೂರು ಏರ್‌ಪೋರ್ಟ್‌ನಲ್ಲಿ ಉದ್ಯೋಗಿಯಾಗಿದ್ದು, ಖಾಸಗಿ ಕಂಪನಿಯ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಅದೇ ಏರ್‌ಪೋರ್ಟ್‌ನಲ್ಲಿ ಹತ್ಯೆಯಾದ ಯುವತಿ ಕೆಲಸ ಮಾಡುತ್ತಿದ್ದು, ಹೀಗಾಗಿ ಈತ ಮೃತರ ಕುಟುಂಬಕ್ಕೆ ಪರಿಚಿತ ಎನ್ನಲಾಗಿದೆ.
ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವರು ಈತ ಎಂದು ಈಗಾಗಲೇ ಗೊತ್ತಾಗಿದೆ. ಈತನಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ.

ಮುಖಕ್ಕೆ ಮಾಸ್ಕ್ ಧರಿಸಿ ಉಡುಪಿಯ ಸಂತೆಕಟ್ಟೆಯಿಂದ ಆಟೋದಲ್ಲಿ ಬಂದಿದ್ದ ಈ ಹಂತಕ, ಮನೆಯೊಳಗೆ ನುಗ್ಗಿ ನಾಲ್ವರ ಹತ್ಯೆಗೈದಿದ್ದ. ಅಲ್ಲದೆ 70 ರ ಹರೆಯದ ನೂರು ಅವರ ತಾಯಿಗೆ ಗಾಯಗೊಳಿಸಿದ್ದ. ನಂತರ ಅಲ್ಲಿಂದ ಬೈಕ್‌ವೊಂದರಲ್ಲಿ ಸಂತೆಕಟ್ಟೆಯವರೆಗೆ ಬಂದು, ಅಲ್ಲಿಂದ ರಿಕ್ಷಾದಲ್ಲಿ ಉಡುಪಿಗೆ, ಉಡುಪಿಯಿಂದ ಉದ್ಯಾವರದರೆಗೆ ಮತ್ತೊಂದು ಬೈಕ್‌ನಲ್ಲಿ ಸಹ ಸವಾರನಾಗಿ ಸಾಗಿರುವುದು ಕಂಡು ಬಂದಿದೆ. ಹತ್ಯೆಯ ಬಳಿಕ ರಕ್ತಸಿಕ್ತ ಬಟ್ಟೆಯನ್ನು ಬದಲಿಸಿದ್ದ. ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ತನ್ನ ಜೊತೆ ತೆಗೆದುಕೊಂಡು ಹೋಗಿದ್ದ.
ಹಂತಕ ಯಾವುದೇ ಅಂಜಿಕೆಯಿಲ್ಲದೇ ಮನೆಯೊಳಗೆ ಹೋಗಿದ್ದ ಎಂದರೆ, ಮನೆಯ ಯಾವುದೋ ಒಬ್ಬ ಸದಸ್ಯರಿಗೆ ಪರಿಚಿತ ಆಗಿರಬೇಕು ಎಂದು ಪೊಲೀಸರು ಅಂದಾಜಿಸಿದ್ದಾರೆ. ಹೀಗಾಗಿ ಮನೆಯ ಸದಸ್ಯರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈತ ಮಂಗಳೂರು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಆತ ರಜೆ ಮಾಡಿರುವುದು ಗೊತ್ತಾಗಿದೆ. ಅಲ್ಲದೇ ಹತ್ಯೆಯಾದ ಯುವತಿಯೊಂದಿಗೆ ಸಲುಗೆಯಿಂದ ಇದ್ದ ಎಂಬ ಮಾಹಿತಿ ಕೂಡಾ ಪೊಲೀಸರಿಗೆ ಲಭಿಸಿದೆ.
ಅಷ್ಟು ಮಾತ್ರವಲ್ಲದೇ, ಶಂಕಿತ ಆರೋಪಿಯ ಫೋಟೋ ಮತ್ತು ಆತನ ಫೋಟೋಗೆ ಸಾಮ್ಯತೆ ಕಂಡು ಬಂದಿದ್ದು, ಪೊಲೀಸರು ಆತನನ್ನು ಹುಡುಕಾಟದಲ್ಲಿದ್ದರು. ಮಂಗಳವಾರ ಆರೋಪಿ ಬಳಸುತ್ತಿದ್ದ ಮೊಬೈಲ್ ಬೆಳಗಾವಿಯ ಕುಡಚಿ ಬಳಿ ಆನ್ ಆಗಿತ್ತು. ಈ ಆಧಾರದಲ್ಲಿ ಆತನಿಗೆ ಸಂಪರ್ಕವಿರುವ ಮನೆಯಲ್ಲಿ ದಾಳಿ ನಡೆಸಿದಾಗ ಆರೋಪಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಮೃತ ಅಯ್ನಾಝ್ ಎಂಬಾಕೆಗೆ ಪರಿಚಿತನಾಗಿದ್ದ ಈತ, ನಂತರ ಈಕೆಯ ಮೂಲಕವೇ ಈ ಕುಟುಂಬಕ್ಕೆ ಪರಿಚಿತ ಕೂಡಾ ಆಗಿದ್ದ. ಅಯ್ನಾಝ್‌ನೊಂದಿಗೆ ಯಾವುದೋ ದೊಡ್ಡದಾದ ಮನಸ್ತಾಪ ಹಾಗೂ ದ್ವೇಷ ಉಂಟಾಗಿ ಈ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕತಪಡಿಸಲಾಗಿದೆ.
ಹಾಗೆನೇ ಇನ್ನೊಂದು ಮಾಹಿತಿಯ ಪ್ರಕಾರ, ಇಬ್ಬರು ಪರಸ್ಪರ ಆತ್ಮೀಯರಾಗಿದ್ದು, ನಂತರ ಅಯ್ನಾಜ್ ಆತನಿಂದ ದೂರವಾಗಿದ್ದಳು. ಇದರಿಂದ ಕೋಪಗೊಂಡ ಪ್ರವೀಣ್ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದನೇ ಎಂದು ಅಂದಾಜಿಸಲಾಗಿದೆ.
ಇನ್ನೂ ಒಂದು ಮೂಲಗಳ ಪ್ರಕಾರ, ಆರೋಪಿ ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ತೊಡಗಿಕೊಂಡಿದ್ದು, ಇದು ಅಯ್ನಾಜ್ ಗಮನಕ್ಕೆ ಬಂದಿದ್ದು, ಅದನ್ನು ಆಕೆ ಸಂಬಂಧಪಟ್ಟವರಿಗೆ ತಿಳಿಸಿದ್ದು, ಅಥವಾ ತಿಳಿಸುವ ಭೀತಿಯಲ್ಲಿ ಈ ಕೊಲೆ ನಡೆದಿರಬಹುದೇ ಎನ್ನಲಾಗಿದೆ. ಇದು ಏನಾದರೂ ನಿಜವಾಗಿದ್ದರೆ, ಇದರ ಹಿಂದೆ ಇರುವ ಕಾಣದ ಕೈಗಳು ಕೆಲಸ ಮಾಡಿರಬಹುದೇ ಎಂದು ಸಂಶಯಿಸಲಾಗಿದೆ. ಇದನ್ನು ಮರೆಮಾಚಲು ಅನೈತಿಕ ಸಂಬಂಧದ ಕಟ್ಟು ಕಥೆಯನ್ನು ಮಾಧ್ಯಮಗಳಿಗೆ ಹೇಳಲಾಗುತ್ತಿದೆಯೇ ಎಂಬ ಆರೋಪ ಕೂಡಾ ಕೇಳಿ ಬರುತ್ತಿದೆ.
ಇದೇನೇ ಇದ್ದರೂ ಇನ್ನೂ ಹೆಚ್ಚಿನ ಮಾಹಿತಿ ಮುಂದೆ ಲಭ್ಯವಾಗಲಿದೆ. ಆರೋಪಿಯ ಬಂಧನದಿಂದ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಲಿದೆ.
ಇದನ್ನೂ ಓದಿ: V Somanna: ವಿ. ಸೋಮಣ್ಣ ಕಾಂಗ್ರೆಸ್ ಸೇರೋದು ಫಿಕ್ಸ್ ?! ಈ ಕ್ಷೇತ್ರದಿಂದಲೇ ಲೋಕಸಭೆ ಸ್ಪರ್ಧೆ ?!
