Home » ಉಡುಪಿ: ಕೋರ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಸಾವು

ಉಡುಪಿ: ಕೋರ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಸಾವು

0 comments

ಏಕಾಏಕಿ ಕುಸಿದು ಬಿದ್ದು ಕೋರ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಉಡುಪಿ ಗುಂಡಿಬೈಲು ಶಾಲೆಯ ಬಳಿಯ ನಿವಾಸಿ ಹುಸೇನ್ ಸಾಬ್ ನದಾಫ್ (22) ಎಂದು ಗುರುತಿಸಲಾಗಿದೆ.

ನದಾಫ್ ಕಳೆದ 6 ವರ್ಷಗಳಿಂದ ಆದಿ ಉಡುಪಿಯ ಪ್ರವೀಣ್ ಡಿ.ಪೂಜಾರಿ ಎಂಬುವರೊಂದಿಗೆ ಕೋರ್ ಕಟ್ಟಿಂಗ್ ಕೆಲಸ ಮಾಡಿಕೊಂಡಿದ್ದರು. ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಭಗವತಿ ಹಾಲ್‌ನ ಒಂದನೇ ಮಹಡಿಯ ಓವರ್ ಹೆಡ್ ಟ್ಯಾಂಕಿನ ಕೋರ್ ಕಟ್ಟಿಂಗ್ ಕೆಲಸ ಮುಗಿಸಿದವರು ಏಕಾಏಕಿ ಕುಸಿದು ಬಿದ್ದಿದ್ದರು.

ಕೂಡಲೇ ಇವರನ್ನು ಇವರ ಜೊತೆಗಿದ್ದ ಇತರ ಕೆಲಸಗಾರರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಹುಸೇನ್ ಸಾಬ್ ನದಾಫ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment