7
Udupi: ಸೋಮವಾರ (ನಿನ್ನೆ) ಬೆಳ್ಳಂಬೆಳಗ್ಗೆ ಉಡುಪಿಯ ಬಾರ್ ಮಾಲಕರೊಬ್ಬರ ಮನೆಯಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲಕರ ಪತ್ನಿ ಅಶ್ವಿನಿ ಶೆಟ್ಟಿ (47) ಚಿಕಿತ್ಸೆ ಫಲಿಸದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಜು.16) ನಿಧನ ಹೊಂದಿದ್ದಾರೆ.
ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದ ಅಶ್ವಿನಿಯವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರ ಪತಿ ರಮಾನಂದ ಶೆಟ್ಟಿ ಜು.15 ರ ಸೋಮವಾರ ಮೃತಪಟ್ಟಿದ್ದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
