Home » ಉಡುಪಿ : ಅಣ್ಣ – ತಮ್ಮಂದಿರ ಗಲಾಟೆ | ಸಿಟ್ಟಿನ ಭರದಲ್ಲಿ ಅಣ್ಣನನ್ನೇ ಕತ್ತಿಯಿಂದ ಕಡಿದು ಕೊಂದ ತಮ್ಮ

ಉಡುಪಿ : ಅಣ್ಣ – ತಮ್ಮಂದಿರ ಗಲಾಟೆ | ಸಿಟ್ಟಿನ ಭರದಲ್ಲಿ ಅಣ್ಣನನ್ನೇ ಕತ್ತಿಯಿಂದ ಕಡಿದು ಕೊಂದ ತಮ್ಮ

0 comments

ತಮ್ಮನೇ ಅಣ್ಣನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ನಡೆದಿದೆ. ಮನೆಯಲ್ಲಿ ವಾಸ್ತವ್ಯ ವಿಚಾರದಲ್ಲಿ ಈ ಕೊಲೆ ನಡೆದಿದೆ.

ಕಬ್ಯಾಡಿ ಕಂಬಳಕಟ್ಟ ನಿವಾಸಿ 43 ವರ್ಷದ ಬಾಲಕೃಷ್ಣ ನಾಯ್ಕ ಕೊಲೆಯಾದ ವ್ಯಕ್ತಿ.

ಬಾಲಕೃಷ್ಣ ಹಾಗೂ ಅವರ ಸಹೋದರ ದಯಾನಂದ ಇವರಿಬ್ಬರ ಮಧ್ಯೆ ಮಾ.16ರಂದು ಸಂಜೆ 6.30 ಕ್ಕೆಮನೆಯ ವಾಸ್ತವ್ಯದ ವಿಚಾರದಲ್ಲಿ ಗಲಾಟೆಯಾಗಿದೆ. ಈ ಗಲಾಟೆ ತಾರಕಕ್ಕೇರಿ ಸಿಟ್ಟಿನಿಂದ ದಯಾನಂದ ಮನೆಯಲ್ಲಿದ್ದ ಕತ್ತಿಯಿಂದ ಬಾಲಕೃಷ್ಣ ಅವರ ತಲೆಗೆ ಹಲ್ಲೆ ಮಾಡಿದ್ದಾನೆ. ಇದರಿಂದ ಬಾಲಕೃಷ್ಣ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಣಿಪಾಲ ಠಾಣಾ ನಿರೀಕ್ಷಕ ಮಂಜುನಾಥ್, ಠಾಣಾಧಿಕಾರಿಗಳಾದ ರಾಜಶೇಖರ್ ಹೊಂದಾಳೆ, ಸುಧಾಕರ ತೋನ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment