Home » ಪೊಲೀಸ್ ಅಧಿಕಾರಿಗಳ ವಸತಿಗೃಹದಿಂದಲೇ ಸೈಕಲ್ ಕಳವು ಮಾಡಿದ ಕಿಲಾಡಿ

ಪೊಲೀಸ್ ಅಧಿಕಾರಿಗಳ ವಸತಿಗೃಹದಿಂದಲೇ ಸೈಕಲ್ ಕಳವು ಮಾಡಿದ ಕಿಲಾಡಿ

by Mallika
0 comments

ಉಡುಪಿ : ಪೊಲೀಸ್ ಅಧಿಕಾರಿಗಳ ವಸತಿ ಗೃಹದಿಂದಲೇ ಸೈಕಲೊಂದನ್ನು ಕಳವು ಮಾಡಿದ ಘಟನೆ ನಡೆದಿದೆ.ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು,ಪ್ರಕರಣ ದಾಖಲಾಗಿದೆ.

ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ನಿರೀಕ್ಷಕರಾದ ರಫೀಕ್ ಎಂ.ಅವರು ಉಡುಪಿ ನಗರ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಪೊಲೀಸ್ ಅಧಿಕಾರಿಗಳ ವಸತಿ ಗೃಹದಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿದ್ದರು. ಇವರ ಕಾರು, ಸ್ಕೂಟಿ ಹಾಗೂ ಎರಡು ಸೈಕಲ್‌ಗಳನ್ನು ವಸತಿಗೃಹದ ಪಕ್ಕದಲ್ಲಿನ ಶೆಡ್‌ನಲ್ಲಿ ನಿಲ್ಲಿಸಿದ್ದರು.

ಫೆ.13ರಿಂದ ಫೆ.14ರ ನಡುವೆ ಯಾರೋ ಕಳ್ಳರು ಸೈಕಲ್‌ ಗಳಿಗೆ ಅಳವಡಿಸಿದ ಬೀಗವನ್ನು ಮುರಿದು ಒಟ್ಟು 16,100 ರೂ.ಮೌಲ್ಯದ ಎರಡು ಸೈಕಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ಎರಡು ದಿನ ಕಳೆದರೂ ಪತ್ತೆಯಾಗದ ಕಾರಣ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು,ಪ್ರಕರಣ ದಾಖಲಾಗಿದೆ.

You may also like

Leave a Comment