Home » Udupi: ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ತಂದೆಯ ಕೊಲೆಯೊಂದಿಗೆ ದುರಂತ ಅಂತ್ಯ !

Udupi: ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ತಂದೆಯ ಕೊಲೆಯೊಂದಿಗೆ ದುರಂತ ಅಂತ್ಯ !

1 comment
Udupi

Udupi : ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ ಮೊಗವೀರ ಪೇಟೆಯಲ್ಲಿ ತಂದೆ-ಮಗನ ನಡುವಿನ ಜಗಳವೊಂದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಪರ್ಯಾವಸನಗೊಂಡ ಘಟನೆ ನಡೆದಿದೆ(Udupi news).

ತಂದೆ ಮಗನ ಗಲಾಟೆಯಲ್ಲಿ ತಂದೆ ಸಾವಿಗೀಡಾದ ಘಟನೆ ನಡೆದಿದೆ. ಮೃತರನ್ನು ಸಾಧು ಮರಕಾಲ ಎಂದು ಗುರುತಿಸಲಾಗಿದೆ. ತಂದೆ ಮನೆ ಬಿಟ್ಟು ಹೋಗಬೇಕೆಂದು ಬಯಸಿದ್ದ ಮಗ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಗಲಾಟೆ ಶನಿವಾರ ಬೆಳಗ್ಗೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಮಾರಣಾಂತಿಕ ಘಟನೆ ನಡೆದಿದೆ ಎನ್ನಲಾಗಿದೆ.

ಮಧ್ಯಾಹ್ನ ಸೊಸೆ ಸುಹಾಸಿನಿ ಕೊಕ್ಕರ್ಣಿಯಲ್ಲಿದ್ದಾಗ ಪಕ್ಕದ ಮನೆಯವರಿಂದ ಕರೆ ಬಂದಿದ್ದು, ಮಾವ ಸಾಧುರವರು ಮನೆಯ ಹಿಂಬದಿಯ ಓಣಿಯಲ್ಲಿ ಗಾಯಗೊಂಡು ಬಿದ್ದಿದ್ದಾರೆ ತುಂಬಾ ರಕ್ತ ಹರಿದಿರುತ್ತದೆ ಎಂದು ನೆರೆಯವರು ತಿಳಿಸಿದ್ದು, ತಕ್ಷಣ ಸೊಸೆ ಬಂದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವೈದ್ಯರು ಸಾಧು ಮರಕಾಲರವರನ್ನು ಪರೀಕ್ಷಿಸಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಸೊಸೆ ಸುಹಾಸಿನಿ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: 2000 ಹಣ ವರ್ಗಾವಣೆ ಮಾಡಿದ್ದಷ್ಟೇ, ಬಂತು ನೋಡಿ ಆತನ ಖಾತೆಗೆ 753 ಕೋಟಿ ಹಣ! ಅಷ್ಟಕ್ಕೂ ಈ ಹಣ ಎಲ್ಲಿದ್ದು ಗೊತ್ತಾ?

You may also like

Leave a Comment