Udupi Miracle : ಅರಬ್ಬಿ ಸಮುದ್ರಕ್ಕೆ(Arabian Sea)ಆಯತಪ್ಪಿ ಬಿದ್ದ ಮೀನುಗಾರನೊಬ್ಬನ( Fisherman)ರೋಚಕ ಕಹಾನಿ ಕೇಳಿದರೆ ನೀವು ಕೂಡ ಅಚ್ಚರಿಗೆ ಒಳಗಾಗುವುದು ಖಚಿತ!!! ಸಮುದ್ರದಾಳದಲ್ಲಿ ನಡೆಯಿತು ಅದೊಂದು ಪವಾಡ(Miracle)! ಈ ಮೀನುಗಾರ ಬದುಕಲು ಕೇವಲ ಅದೊಂದು ವಿಚಾರ ಕಾರಣವಾಯಿತು. ಅರೇ ಇದೇನಿದು, ಎಂದು ಯೋಚಿಸುತ್ತಿದ್ದೀರಾ?
ತಮಿಳುನಾಡಿನ(Tamilnadu )ಎಂಟು ಮಂದಿಯ ತಂಡ ಆಳಸಮುದ್ರ ಮೀನಗಾರಿಕೆಗೆ ಅರಬ್ಬೀ ಸಮುದ್ರಕ್ಕೆ ಇಳಿದಿದ್ದರು. ಈ ತಂಡದಲ್ಲಿದ್ದ ಮುರುಗನ್ (25) ಎಂಬುವವರು ಶನಿವಾರ ರಾತ್ರಿ ಮೂತ್ರವಿಸರ್ಜನೆಗೆಂದು ಬೋಟ್ ನ ಅಂಚಿಗೆ ಹೋಗಿದ್ದಾರೆ. ಈ ಸಂದರ್ಭ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಕತ್ತಲೆ ಆವರಿಸಿದ್ದ ಹಿನ್ನೆಲೆ ಈ ವಿಚಾರ ಯಾರಿಗೂ ಗೊತ್ತಾಗಿರಲಿಲ್ಲ. ಆದರೆ, ಎಷ್ಟೋ ಹೊತ್ತಾದರೂ ಮುರುಗನ್ ಕಾಣದೆ ಇದ್ದ ಹಿನ್ನೆಲೆ ಸಮುದ್ರಕ್ಕೆ ಬಿದ್ದಿರಬಹುದು ಎಂಬ ಶಂಕೆ ಉಳಿದವರಿಗೆ ಮೂಡಿ ತೀವ್ರ ಶೋಧ ನಡೆಸಿದ್ದಾರೆ. ಆದಾಗ್ಯೂ, ಎರಡು ದಿನ ಕಳೆದರೂ ಮುರುಗನ್ ಪತ್ತೆಯಾಗದ ಹಿನ್ನೆಲೆ ತಮ್ಮ ಮಾಲೀಕನಿಗೆ ಮುರುಗನ್ ಮೃತಪಟ್ಟಿದ್ದಾನೆ ಎಂಬ ಅನುಮಾನವಿರುವ ಬಗ್ಗೆ ಉಳಿದವರು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಮೂಲದ ಮುರುಗನ್ ಎಂಬ ಮೀನುಗಾರ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ಸಂದರ್ಭ ಬೋಟಿನಿಂದ ಆಯತಪ್ಪಿ ಬಿದ್ದಿದ್ದರು. ಮುರುಗನ್ ಸತತ ಎರಡು ದಿನಗಳ ಕಾಲ ಛಲ ಬಿಡದೆ ಈಜುತ್ತಾ ಬಂದಿದ್ದಾರೆ. ನವೆಂಬರ್ 10ರಂದು ಸಾಗರ್ ಬೋಟ್ ಮೀನುಗಾರರು ಸಮುದ್ರಕ್ಕೆ ಇಳಿದಿದ್ದು, ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಮುಳುಗೇಳುವಂತೆ ಕಾಣುತ್ತಿದ್ದ ಮುರುಗನ್ ಕಾಣಿಸಿದ್ದಾರೆ. ಆದರೆ ಅಸ್ಪಷ್ಟವಾಗಿ ಕಾಣುತ್ತಿದ್ದ ಹಿನ್ನೆಲೆ ಮೀನು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಮೀನು ಎಂದು ಮುರುಗನ್ ಬಳಿ ಹೋದಾಗ ಮುರುಗನ್ ಜೀವಂತವಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಗಂಗೊಳ್ಳಿ ಮೀನುಗಾರರು ಮುರುಗನ್ನನ್ನು ರಕ್ಷಣೆ ಮಾಡಿದ್ದು, ಜೀವ ಉಳಿಸಿಕೊಳ್ಳಲು ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ (Swimming)ಮುರುಗನ್ ನಿತ್ರಾಣಗೊಂಡಿದ್ದ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಸರಿಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರ ಮುರುಗನ್ ಬದುಕಿ ಉಳಿದಿದ್ದು ಪವಾಡವೇ ಸರಿ!! ಗಂಗೊಳ್ಳಿ ಮೀನುಗಾರರು ಪ್ರಥಮ ಚಿಕಿತ್ಸೆ ನೀಡಿ ಮುರುಗನ್ ಜೀವ ರಕ್ಷಣೆ ಮಾಡಿದ್ದಾರೆ.
