Home » Udupi Crime News: ನೇಜಾರು ಹತ್ಯೆ ಪ್ರಕರಣ; ದಾರಿ ಮಧ್ಯೆ ರಕ್ತಸಿಕ್ತ ಬಟ್ಟೆ ಸುಟ್ಟು ಹಾಕಿದ ನರಹಂತಕ ಪ್ರವೀಣ್ ಚೌಗುಲೆ!

Udupi Crime News: ನೇಜಾರು ಹತ್ಯೆ ಪ್ರಕರಣ; ದಾರಿ ಮಧ್ಯೆ ರಕ್ತಸಿಕ್ತ ಬಟ್ಟೆ ಸುಟ್ಟು ಹಾಕಿದ ನರಹಂತಕ ಪ್ರವೀಣ್ ಚೌಗುಲೆ!

0 comments
Udupi Crime News

Udupi: ಉಡುಪಿ ನೇಜಾರುವಿನಲ್ಲಿ ನ.12 ರಂದು ಹಾಡಹಗಲೇ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಿದ ಕಿರಾತಕ, ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಕ್ಯಾಬಿನ್‌ ಕ್ರೂ ಪ್ರವೀಣ್‌ ಅರುಣ್‌ ಚೌಗುಲೆ (39) ಕೃತ್ಯ ನಡೆಸಿ ರಕ್ತಸಿಕ್ತ ಬಟ್ಟೆಯಲ್ಲೇ ಸ್ಥಳದಿಂದ ಪರಾರಿಯಾಗಿದ್ದು, ಆ ಬಟ್ಟೆಯನ್ನು ಮಂಗಳೂರು ತೆರಳುವ ಮಾರ್ಗ ಮಧ್ಯೆ ಸುಟ್ಟು ಹಾಕಿ ಸಾಕ್ಷ್ಯನಾಶ ನಡೆಸಿರುವುದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ ಎಂದು ಮಾಧ್ಯಮವೊಂದು ಪ್ರಕಟ ಮಾಡಿದೆ.

8th Pay Commission: ಕೇಂದ್ರ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ: ಅತೀ ಶೀಘ್ರದಲ್ಲೇ ಹೊಸ ವೇತನ ಆಯೋಗ ರಚನೆ!?ಮೂಲ ವೇತನ ಹೆಚ್ಚಳ?

ಕೊಲೆ ಮಾಡುವ ಮೊದಲು ಹೆಜಮಾಡಿ ಟೋಲ್‌ನಿಂದ ಆಚೆಗೆ ಕಾರು ನಿಲ್ಲಿಸಿದ್ದ ಆರೋಪಿ ಪ್ರವೀಣ್‌, ನಂತರ ನೇಜಾರುವಿನಿಂದ ಪರಾರಿಯಾಗಿದ್ದು, ನಂತರ ತನ್ನ ಕಾರಿನ ಮೂಲಕ ಮಂಗಳೂರಿನತ್ತ ಬಂದಿದ್ದ. ರಕ್ತಸಿಕ್ತ ಬಟ್ಟೆಯಲ್ಲಿ ಮನೆಗೆ ಬಂದರೆ ಪತ್ನಿಗೆ ಅನುಮಾನ ಬರುವ ಕಾರಣ ಸಾಕ್ಷ್ಯನಾಶ ಪಡಿಸಲು ಮಂಗಳೂರಿಗೆ ತೆರಳುವ ಮುನ್ನವೇ ಸುರಕ್ಷಿತ ಜಾಗ ನೋಡಿ ಕೃತ್ಯದ ವೇಳೆ ರಕ್ತಸಿಕ್ತವಾದ ಬಟ್ಟೆಯನ್ನು ಬಿಚ್ಚಿ ಸುಟ್ಟು ಹಾಕಿದ್ದ ಕುರಿತು ಪೊಲೀಸರಲ್ಲಿ ಹೇಳಿದ್ದಾನೆ ಎಂದು ಬಾಯ್ಬಿಟ್ಟಿದ್ದಾನೆ.

ತನಿಖಾ ತಂಡಕ್ಕೆ ಇಂದು (ನ.20) ರಂದು ಆ ಸ್ಥಳ ತೋರಿಸುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮ ಪ್ರಕಟ ಮಾಡಿದೆ. ಅಷ್ಟು ಮಾತ್ರವಲ್ಲದೇ ಕೃತ್ಯಕ್ಕೆ ಬಳಸಿದಿದ್ದ ಮಹತ್ವದ ಸಾಕ್ಷಿಯಾದ ಚೂರಿಯನ್ನು ನ.18 ರಂದು ಮಂಗಳೂರಿನ ಬಿಜೈ ಫ್ಲ್ಯಾಟ್‌ನಲ್ಲಿ ವಶಪಡಿಸಲಾಗಿತ್ತು.

ಕೊಲೆ ಮಾಡಿ ಮನೆಗೆ ಬಂದರೂ ಪತ್ನಿಗೆ ಪತಿ ಹಂತಕ ಎನ್ನುವ ಕುರಿತು ಸ್ವಲ್ಪನೂ ಅನುಮಾನ ಬಂದಿರಲಿಲ್ಲ. ಈ ಕುರಿತು ಪತ್ನಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ ದಿನ ಬೆಳಗ್ಗೆ ಕೆಲಸದ ಸಮಯಕ್ಕಿಂತಲೂ ಮೊದಲೇ ಮನೆ ಬಿಟ್ಟಿದ್ದ. ಎಲ್ಲಿಗೆ ಹೋಗುತ್ತೇನೆ ಎಂಬ ಮಾಹಿತಿ ಹೇಳಿರಲಿಲ್ಲ. ಕೊಲೆ ಮಾಡಿ ಮನೆಗೆ ಬಂದಿದ್ದು, ಕೈಗೆ ಆಗಿರುವ ಗಾಯದ ಕುರಿತು ಏನೂ ಹೇಳದೆ, ಗಾಯವನ್ನು ಮುಚ್ಚಿಟ್ಟಿದ್ದ. ಈತನ ಹಣಕಾಸಿನ ವ್ಯವಹಾರದ ಕುರಿತು ಏನೂ ಮಾಹಿತಿ ಇಲ್ಲ. ಈತನಿಗೆ ತಿಂಗಳಿಗೆ ಒಂದು ಲಕ್ಷ ವೇತನ ಬರುತ್ತಿತ್ತು ಎನ್ನಲಾಗಿದೆ.

ಇದನ್ನು ಓದಿ: Government Scheme: ತಿಂಗಳಲ್ಲಿ 5 ಸಾವಿರ ಪಡೆಯಲು ಸರ್ಕಾರದಿಂದ ಸುವರ್ಣ ಅವಕಾಶ ! ಈ ಕೂಡಲೇ ಅರ್ಜಿ ಸಲ್ಲಿಸಿ

You may also like

Leave a Comment