Kundapur: ಕುಂದಾಪುರ (Kundapur) ಎಸ್ಸೆಸ್ಸೆಲ್ಸಿ (SSLC )ವ್ಯಾಸಂಗ ಮಾಡುತ್ತಾ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು(Student )ಮನೆಯಲ್ಲಿ ಆತ್ಮಹತ್ಯೆಗೆ(Suicide)ಶರಣಾದ ಘಟನೆ ಪಡುಕೋಣೆ ಎಂಬಲ್ಲಿ ವರದಿಯಾಗಿದೆ.
ಮೃತ ದುರ್ದೈವಿಯನ್ನು ಸಿಂಧು(16) ಎಂದು ಗುರುತಿಸಲಾಗಿದೆ.ಕುಂದಾಪುರದ ಪುರಸಭೆಯಲ್ಲಿ ಪೌರಕಾರ್ಮಿಕರಾಗಿರುವ ಪಡುಕೋಣೆ ನಿವಾಸಿಯಾದ ಪ್ರಶಾಂತ್ ಮತ್ತು ಸುನಂದಾ ದಂಪತಿಗಳ ಮಗಳು ಸಿಂಧು ಕುಂದಾಪುರದ ವಡೇರಹೋಬಳಿಯ ಬಾಲಕಿಯರ ವಸತಿ ನಿಲಯದಲ್ಲಿ ನೆಲೆಸಿದ್ದಳು. ಅಲ್ಲದೆ, ಅಲ್ಲೇ ಹತ್ತಿರದ ಸರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.
ಕಳೆದೆರಡು ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆ ತನ್ನ ಮನೆಗೆ ಬಂದಿದ್ದ ಸಿಂಧು ತಾಯಿಯ ಜೊತೆಗೆ ಬುಧವಾರ ಆಸ್ಪತ್ರೆಗೆ ಕೂಡ ಹೋಗಿ ಬಂದಿದ್ದಳು ಎನ್ನಲಾಗಿದೆ. ಈ ನಡುವೆ ಗುರುವಾರ ಶಾಲೆಗೆ ಬಿಡುವುದಾಗಿ ತಂದೆ ಹೇಳಿದ್ದರಂತೆ.ಆದರೆ, ಈ ನಡುವೆ, ಸಿಂಧು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ಸದ್ಯ ತಿಳಿದುಬಂದಿಲ್ಲ. ಈ ಪ್ರಕರಣದ ಕುರಿತಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Important information:ನಂದಿಬೆಟ್ಟ ವೀಕ್ಷಿಸಲು ಹೋಗುವವರಿಗೆ ಹೊಸ ರೂಲ್ಸ್ ಜಾರಿ!!! ಇನ್ಮುಂದೆ ಇದನ್ನು ಪಾಲಿಸಲೇಬೇಕು!
