Swami koragajja temple: ಕರಾವಳಿ ಜನರಲ್ಲಿ ಒಂದು ನಂಬಿಕೆ ಇದೆ. ಯಾವುದೇ ವಸ್ತುಗಳು ಕಾಣೆಯಾದ, ವ್ಯಕ್ತಿ ನಾಪತ್ತೆಯಾದಾಗ ಕೊರಗಜ್ಜನಿಗೆ(Swami koragajja temple) ಪ್ರಾರ್ಥನಿಗೆ ಮಾಡಿದರೆ, ಕಳೆದು ಹೋದ ವಸ್ತು, ಕಾಣೆಯಾದ ವ್ಯಕ್ತಿ ಸಿಗುವ ನಂಬಿಕೆ ಇದೆ. ಹಾಗೆನೇ ಕುಂದಾಪುರದಲ್ಲಿ ಯುವಕನೋರ್ವ ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದು, ಕೊನೆಗೆ ಕೊರಜ್ಜನ ಬಳಿ ಪ್ರಾರ್ಥನೆ ಮಾಡಿ ಬಳಿಕ ತನ್ನ ಸಾಕುನಾಯಿಯೊಂದಿಗೆ ಪತ್ತೆಯಾದ ಅಚ್ಚರಿಯ ಘಟನೆ ನಡೆದಿತ್ತು.

Image Credit: Udayavani
ಮುಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ಎಂಬ ಯುವಕ ಕಳೆದ ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಕೊನೆಗೆ ಕೊರಗಜ್ಜ ದೈವದ ಅಭಯದಿಂದ ಜೀವ ಉಳಿಸಿಕೊಂಡು ನಾಡಿಗೆ ಬಂದಿರುವ ಘಟನೆ ಎಲ್ಲರಿಗೂ ತಿಳಿದೇ ಇದೆ.

ಹಾಗಾಗಿ ಕೊರಗಜ್ಜನ ಅಭಯದಂತೆ ಸೆ.24 ರಂದು ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ ಘಟನೆ ನಡೆದಿದೆ.
ಕಳೆದ ಎಂಟು ದಿನಗಳ ಹಿಂದೆ ನಾಪತ್ತೆಯಾದ ಯುವಕನ ಮನೆಯವರು, ಆತ ಸಿಗದೇ ಇದ್ದಾಗ, ಮುಳ್ಳುಗುಡ್ಡೆ ಕೊರಗಜ್ಜನ ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಮಾಡಿದ್ದರು. ಆಗ ಅಲ್ಲಿನ ಕ್ಷೇತ್ರದ ಧರ್ಮದರ್ಶಿ ಅವರು, ಹಂದಿಯೊಂದು ಓಡಿಸಿಕೊಂಡು ಹೋಗಿ ದಾರಿ ತಪ್ಪಿದ್ದಾನೆ, ಹಕ್ಕಿಯೊಂದು ದಾರಿ ತೋರಿಸಿದೆ, ಹಳದಿ ಬಣ್ಣದ ಅಂಗಿ ಹಾಕಿ ಕಾಡಿನಲ್ಲಿ ಅಡಗಿ ಕುಳಿತಿದ್ದಾನೆ. ಐದು ಜನ ಸೇರಿ ಅಲ್ಲಿ ಹೋಗಿ ಹುಡುಕಿ, ಇಲ್ಲವಾದರೆ ಆತನೇ ಎರಡು ದಿನದ ಬಳಿಕ ಮನೆಗೆ ಬರುತ್ತಾನೆ ಎಂದು ಹೇಳಿದ್ದರು.
ಹಾಗಾಗಿ ಆತ ಬದುಕು ವಾಪಾಸ್ ಬಂದಿರುವುದೇ ಅಜ್ಜನ ಪವಾಡದಿಂದ ಎಂದು ಮನೆ ಮಂದಿ ಹೇಳಿದ್ದಾರೆ. ಹಾಗಾಗಿ ಯುವಕ ಮನೆಗೆ ಬಂದೊಡನೆ ಮುಳ್ಳುಗುಡ್ಡೆ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: RBI ನಿಂದ ಈ ಬ್ಯಾಂಕ್‌ಗಳು ಕ್ಲೋಸ್! ನಿಮ್ಮ ಠೇವಣಿ ಇದೆಯಾ ಚೆಕ್ ಮಾಡಿ, ಗ್ರಾಹಕರಿಗೆ ದೊರಕಲಿದೆ 5 ಲಕ್ಷ ರೂ.!!!
