Home » ಉಡುಪಿ: ಮಗುವನ್ನು ಮನೆಯಲ್ಲಿ ಬಿಟ್ಟು ಹೊರಹೋದ ಮಹಿಳೆ ಮನೆಗೆ ಬಾರದೆ ನಾಪತ್ತೆ!! ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

ಉಡುಪಿ: ಮಗುವನ್ನು ಮನೆಯಲ್ಲಿ ಬಿಟ್ಟು ಹೊರಹೋದ ಮಹಿಳೆ ಮನೆಗೆ ಬಾರದೆ ನಾಪತ್ತೆ!! ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

0 comments

ಎರಡೂವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಹೊರ ಹೋಗಿದ್ದ ಮಹಿಳೆಯೋರ್ವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.

ನಾಪತ್ತೆಯಾದ ಮಹಿಳೆಯನ್ನು ಕೊರಂಗ್ರಪಾಡಿ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಕ್ಷತಾ(27)ಎಂದು ಗುರುತಿಸಲಾಗಿದೆ. ಮಾರ್ಚ್ ಹತ್ತರಂದು ಮಹಿಳೆ ಮನೆಯಿಂದ ನಾಪತ್ತೆಯಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ತೆಗೆ ಮನವಿ
ಮಹಿಳೆಯು 5ಅಡಿ 2 ಇಂಚು ಎತ್ತರ, ಬಿಳಿ ಮೈಬಣ್ಣ ಹಾಗೂ ಕೋಲು ಮುಖವನ್ನು ಹೊಂದಿದ್ದು, ಕನ್ನಡ ಬಾಷೆ ಮಾತನಾಡುತ್ತಾರೆ. ಮಹಿಳೆಯು ಪತ್ತೆಯಾದಲ್ಲಿ ಉಡುಪಿ ನಗರ ಠಾಣೆಯನ್ನು ಅಥವಾ ಪೊಲೀಸ್ ಕಂಟ್ರೋಲ್ ರೂಮ್ ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

You may also like

Leave a Comment