Home » ವೈರಲ್ ಸ್ಟಾರ್ ಮಲ್ಪೆ ವಾಸಣ್ಣ ಅಸ್ವಸ್ಥ-ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು!! ತನ್ನ ಮಾತಿನ ಶೈಲಿಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ‘ವಾಸು ಮಲ್ಪೆ’

ವೈರಲ್ ಸ್ಟಾರ್ ಮಲ್ಪೆ ವಾಸಣ್ಣ ಅಸ್ವಸ್ಥ-ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು!! ತನ್ನ ಮಾತಿನ ಶೈಲಿಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ‘ವಾಸು ಮಲ್ಪೆ’

0 comments

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಮಾತಿನ ಶೈಲಿಯ ಮೂಲಕ ಹೆಚ್ಚು ಜನರ ಪ್ರೀತಿ ಗಳಿಸಿದ್ದ ಮಲ್ಪೆಯ ವೈರಲ್ ಸ್ಟಾರ್ ವಾಸಣ್ಣ ‘ ವಾಸು ಮಲ್ಪೆ’ ಅನಾರೋಗ್ಯದಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಡುಪಿಯ ಚಿತ್ರಮಂದಿರ ಒಂದರ ಬಳಿಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಅವರನ್ನು ಕಂಡ ಸ್ಥಳೀಯರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಆಟೋ ಚಾಲಕ ಆದಂ ಅವರ ಸಹಕಾರದೊಂದಿಗೆ ವಾಸು ಮಲ್ಪೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.

You may also like

Leave a Comment