Bengaluru : ಅನೇಕ ಜನರು ಉದ್ಯಾನನಗರಿ ಬೆಂಗಳೂರಿಗೆ ಉದ್ಯೋಗವನ್ನು ಅರಸಿ ಬರುತ್ತಾರೆ. ಅವರೆಲ್ಲರೂ ಉಳಿದುಕೊಳ್ಳಲು ಬಾಡಿಗೆ ಮನೆಯನ್ನೇ ಅರಸುತ್ತಾರೆ. ಆದರೆ ಇಂದು ಕಾಲ ಬದಲಾದಂತೆ ಎಲ್ಲವೂ ದುಬಾರಿಯಾಗಿದೆ. ಅದರಲ್ಲೂ ಬಾಡಿಗೆ ಮನೆಗಳನ್ನು ಕೇಳುವುದೇ ಬೇಡ. ಒಂದು ಸಣ್ಣ ಕೋಣೆಗೆ ಇದ್ದರೂ ಕೂಡ ಅದಕ್ಕೆ 5,000 ಕ್ಕಿಂತ ಹೆಚ್ಚು ಬಾಡಿಗೆ ಹೇಳುವುದನ್ನು ನೋಡಬಹುದು. ಆದರೆ ಇದೀಗ ನಾವು ನಿಮಗೆ ಬೆಂಗಳೂರಿನಲ್ಲೇ ಅತಿ ಕಡಿಮೆ ಬೆಲೆಗೆ ಬಾಡಿಗೆ ಮನೆಗೆ ಸಿಗುವ 5 ಏರಿಯಾ ಗಳನ್ನು ಹೇಳುತ್ತೇವೆ.
ಯಲಹಂಕ (ಉತ್ತರ): ಇನ್ನು ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ ಪ್ರದೇಶಗಳಲ್ಲಿ ಯಲಹಂಕ ಉತ್ತರ ಎರಡನೇ ಸ್ಥಾನದಲ್ಲಿದೆ. ಈ ಉಪನಗರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತಿವೆ. ಈ ಪ್ರದೇಶಗಳಲ್ಲಿ 1 ಬಿಎಚ್‌ಕೆ ಮನೆಗಳು ಸಾಮಾನ್ಯವಾಗಿ 7,500 ಸಾವಿರದಿಂದ 10,000 ಸಾವಿರ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಸಿಗುತ್ತಿವೆ.
ಹೊಸಕೋಟೆ (ಪೂರ್ವ): ಬೆಂಗಳೂರಿನ ಪೂರ್ವ ಪ್ರದೇಶವಾಗಿರುವ ಹೊಸಕೋಟೆಯಲ್ಲೂ ಅತ್ಯಂತ ಅಗ್ಗದ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಬಾಡಿಗೆ ಹಾಗೂ ಅಡ್ವಾನ್ಸ್ ಮೊತ್ತವು ಈ ಭಾಗದಲ್ಲಿ ಕಡಿಮೆ ಇದೆ. ಈ ಭಾಗದಲ್ಲಿ ಒಂದು ಬಿಎಚ್‌ಕೆ ಬಾಡಿಗೆ ಮನೆಗಳು 5,500 ಸಾವಿರ ರೂಪಾಯಿಯಿಂದ 8,000 ಸಾವಿರ ರೂಪಾಯಿಯ ವರೆಗೂ ಇದೆ.
ಕೆಂಗೇರಿ (ನೈಋತ್ಯ): ಬೆಂಗಳೂರು – ಮೈಸೂರು ರಸ್ತೆಯ ಭಾಗದಲ್ಲಿ ಮನೆಗಳ ಬಾಡಿಗೆ ಬೆಲೆ ಬೆಂಗಳೂರಿನ ಉಳಿದ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಈ ಪ್ರದೇಶವು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಸಾಲಿನಲ್ಲಿ ಇದೆ. ಮೆಟ್ರೋದಿಂದ ಉತ್ತಮ ಸಂಪರ್ಕ ಹಾಗೂ ಹೆಚ್ಚು ಸದ್ದು ಗದ್ದಲಗಳು ಇಲ್ಲದ ಪ್ರದೇಶ ಇದಾಗಿದೆ. ಈ ಭಾಗದಲ್ಲಿ 1 ಬಿಎಚ್‌ಕೆ ಮನೆಗಳು 4,000 ಸಾವಿರ ರೂಪಾಯಿಯಿಂದ 7,000 ಸಾವಿರ ರೂಪಾಯಿಯ ವರೆಗೆ ಇದೆ.
ಎಲೆಕ್ಟ್ರಾನಿಕ್ ಸಿಟಿ (ಆಗ್ನೇಯ): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶವು ಐಟಿ ಕೇಂದ್ರವಾಗಿದ್ದರೂ, ಅದರ ಹೊರವಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಬೊಮ್ಮಸಂದ್ರ ಹಾಗೂ ಚಂದಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಒಂದು ಬಿಎಚ್‌ಕೆ ಬಾಡಿಗೆ ಮನೆಗಳ ಬೆಲೆಯು 10,000 ಸಾವಿರ ರೂಪಾಯಿಯಿಂದ 12,000 ಸಾವಿರ ರೂಪಾಯಿಯ ವರೆಗೂ ಇದೆ.
ಕನಕಪುರ ರಸ್ತೆ (ದಕ್ಷಿಣ): ಬೆಂಗಳೂರು ದಕ್ಷಿಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಒಂದು ಬಿಎಚ್‌ಕೆ ಮನೆಗಳು ಸಾಮಾನ್ಯವಾಗಿ 6,000 ಸಾವಿರ ರೂಪಾಯಿಯಿಂದ 8,500 ಸಾವಿರ ರೂಪಾಯಿಯ ವರೆಗೂ ಇದೆ.
