Home » SSLC ವಿದ್ಯಾರ್ಥಿನಿ 12ನೆ ಮಹಡಿಯಿಂದ ಬಿದ್ದು ಸಾವು!ಕಾರಣ ಮೊಬೈಲ್ ನಲ್ಲಿ ಅಡಕವಾಗಿದೆಯೇ?

SSLC ವಿದ್ಯಾರ್ಥಿನಿ 12ನೆ ಮಹಡಿಯಿಂದ ಬಿದ್ದು ಸಾವು!ಕಾರಣ ಮೊಬೈಲ್ ನಲ್ಲಿ ಅಡಕವಾಗಿದೆಯೇ?

1 comment
Bengaluru

Bengaluru:ಬೆಂಗಳೂರು(Bengaluru )ಬೆಳ್ಳಂದೂರಿನನಲ್ಲಿರುವ ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿಯ (SSLC)ವಿದ್ಯಾರ್ಥಿನಿ ಮೃತಪಟ್ಟ(Death News)ಘಟನೆ ವರದಿಯಾಗಿದೆ.

ಆತ್ಮಹತ್ಯೆಗೆ (Suicide)ಶರಣಾದ ವಿದ್ಯಾರ್ಥಿನಿಯನ್ನು ಜೆಸ್ಸಿಕಾ (15) ಎಂದು ಗುರುತಿಸಲಾಗಿದೆ. ಕಳೆದ 2 ವರ್ಷಗಳಿಂದ ವಿದ್ಯಾರ್ಥಿನಿ ತನ್ನ ತಂದೆ ಮತ್ತು ತಾಯಿಯೊಂದಿಗೆ ಕ್ಲಾಸಿಕ್ ಅಪಾರ್ಟ್ಮೆಂಟ್‌ನ 11ನೇ ಮಹಡಿಯಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ಜೆಸಿಕಾ ಆತ್ಮಹತ್ಯೆ ಬಳಿಕ ಮಗಳ ಆತ್ಮಹತ್ಯೆಯ ಹಿಂದಿನ ಕಾರಣ ಪತ್ತೆ ಹಚ್ಚಲು ಜೆಸಿಕಾ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜೆಸಿಕಾ ತಂದೆ ದೂರು ನೀಡಿದ ಹಿನ್ನೆಲೆ ಎಫ್ಐಆರ್ ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಶುರು ಮಾಡಿದ್ದು ಅನೇಕ ರೋಚಕ ಮಾಹಿತಿಗಳು ಹೊರ ಬಿದ್ದಿವೆ.

ಮೂಲತಃ ತಮಿಳುನಾಡಿನವರಾಗಿದ್ದ ಜೆಸ್ಸಿಕಾ ಕುಟುಂಬ, ತಂದೆ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ತಾಯಿ ಶಿಕ್ಷಕಿಯಾಗಿದ್ದರು. ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಜೆಸ್ಸಿಕಾ ಮಂಗಳವಾರ ಬೆಳಗ್ಗೆ ಶಾಲೆಗೆ ಹೋಗಿದ್ದು ವಾಪಸ್ ಮನೆಗೆ ಹಿಂತಿರುಗಿದ್ದಾಳೆ. ಬೆಳಗ್ಗೆ 10.30ರ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಜೆಸ್ಸಿಕಾ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಜೆಸ್ಸಿಕಾ ಕಳೆದ 3 ತಿಂಗಳಿಂದ ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಶಾಲೆಯಿಂದ ಬೇಗ ಮನೆಗೆ ಬರುತ್ತಿದ್ದಳು ಎನ್ನಲಾಗಿದೆ. ನಿನ್ನೆ ಬೆಳಿಗ್ಗೆ ಶಾಲಾ ಆಡಳಿತ ಮಂಡಳಿಯಿಂದ ಜೆಸಿಕಾ ತಂದೆ ಡಾಮಿನಿಕ್ ಅವರಿಗೆ ಕಾಲ್ ಬಂದಿದ್ದು, ಈ ವೇಳೆ ಜೆಸಿಕಾ ಶಾಲೆಗೆ ಹಾಜರಾಗುತ್ತಿಲ್ಲ ಎಂಬ ಮಾಹಿತಿ ನೀಡಲಾಗಿದೆ. ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ಜೆಸಿಕಾ ತಂದೆ ತಮ್ಮ ಹೆಂಡತಿಗೆ ಕಾಲ್ ಮಾಡಿ ಮಗಳನ್ನು ಶಾಲೆಗೆ ಕಳಿಸಲು ಸೂಚನೆ ನೀಡಿದ್ದು, ಆಗ ವಿಚಾರ ತಿಳಿದ ದೇವಿ ಅವರು ಮಗಳು ಜೆಸಿಕಾಗೆ ಕರೆ ಮಾಡಿ ನಾನು ಶಾಲೆಗೆ ಬರುತಿದ್ದೇನೆ ನೀನು ಎಲ್ಲಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಫೋನ್ ಸಂಭಾಷಣೆ ಮುಗಿದ ಕೇವಲ 20 ನಿಮಿಷದಲ್ಲಿ ಜೆಸಿಕಾ ಆಕೆ ವಾಸವಿದ್ದ ಅಪಾರ್ಟ್ಮೆಂಟ್ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾದ ಜೆಸಿಕಾ ತಾಯಿ ದೇವಿ ಅವರು ಈ ಹಿಂದೆ ಜೆಸಿಕಾ ಓದುತ್ತಿದ್ದ ಶಾಲೆಯಲ್ಲೇ ಶಿಕ್ಷಕಿಯಾಗಿದ್ದರು. ಆದರೆ, ಮಗಳು ಓದುವ ಶಾಲೆಯಲ್ಲೇ ಶಿಕ್ಷಕಿಯಾಗಿರುವುದು ಬೇಡವೆಂದು ಶಾಲೆ ಬದಲಾಯಿಸಿ ಬೇರೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ತಾಯಿ ಶಾಲೆ ಬದಲಾಯಿಸುತಿದ್ದಂತೆ ಮಗಳು ಜೆಸಿಕಾಳ ನಡವಳಿಕೆ ಹೆಚ್ಚು ಬದಲಾಗುತ್ತಾ ಹೋಯಿತಂತೆ.

ಜೆಸಿಕಾ ಸಾವಿನ ಬಗ್ಗೆ ಅಪಾರ್ಟ್ಮೆಂಟ್ನ ಕೆಲ ನಿವಾಸಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಪ್ರತಿನಿತ್ಯ 7:30ಕ್ಕೆ ಶಾಲೆ ಬಟ್ಟೆ ಧರಿಸಿ ಹೊರಗೆ ಬರುತಿದ್ದ ಜೆಸಿಕಾ ಹೆಚ್ಚಾಗಿ ತನ್ನ ಅಪಾರ್ಟ್ಮೆಂಟ್ ನಲ್ಲಿನ ನಾಯಿ ಜೊತೆ ಕಾಲಹರಣ ಮಾಡುತ್ತಿದ್ದಳು ಎನ್ನಲಾಗಿದೆ. ಯಾರ ಜೊತೆಗು ಕೂಡ ಹೆಚ್ಚು ಬೆರೆಯುವ ಇಲ್ಲವೇ ಹೆಚ್ಚು ಮಾತಾಡುವುದು ಕೂಡ ಮಾಡುತ್ತಿರಲಿಲ್ಲ. ನಾಯಿ ಮತ್ತು ಮೊಬೈಲ್ ನಲ್ಲಿ ಹೆಚ್ಚಿನ ಸಮಯ ಕಳೆಯುತಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ಹಲವು ಬಾರಿ ಶಾಲೆ ರಜೆಯಿದ್ದಾಗ ಕೂಡ ಜೆಸಿಕಾ ಯೂನಿಫಾರ್ಮ್ ಧರಿಸಿ ಹೊರ ಬರುತಿದ್ದಳು. ಈ ಬಗ್ಗೆ ಸ್ಥಳೀಯರು ಕೇಳುತಿದ್ದಂತೆ ರಜೆ ಎಂದು ಮನೆಗೆ ವಾಪಾಸ್ ಹೋಗುತ್ತಿದ್ದ ಪ್ರಕರಣ ಕೂಡ ಇತ್ತು ಎನ್ನಲಾಗಿದೆ.

ಜೆಸಿಕಾ ತನ್ನ ಐ ಫೋನ್ ಸಮೇತ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು,ಈ ಮೊಬೈಲ್ ನಲ್ಲಿ ಏನಾದರು ರೋಚಕ ಮಾಹಿತಿ ಅಡಗಿದೆಯೇ ಎಂಬ ಅನುಮಾನ ಹುಟ್ಟು ಹಾಕಿದೆ.ಹೀಗಾಗಿ ಬೆಳ್ಳಂದೂರು ಪೊಲೀಸರು ಜೆಸಿಕಾ ಬಳಸುತಿದ್ದ ಐಫೋನ್ ಪರಿಶೀಲನೆಗೆ ಮುಂದಾಗಿದ್ದು, ಸದ್ಯ ಜೆಸಿಕಾ ಮೊಬೈಲ್ ಸಂಪೂರ್ಣ ಡ್ಯಾಮೆಜ್ ಆಗಿದೆ. ಹೀಗಾಗಿ ಆಕೆಯ ಕಾಲ್ ಡಿಟೈಲ್, ಚಾಟಿಂಗ್ ಸೇರಿದಂತೆ ಹಲವು ಮಾಹಿತಿಗಳ ಪರಿಶೀಲನೆಗೆ ಪೊಲೀಸರು ಅಣಿಯಾಗಿದ್ದು, ಮೊಬೈಲ್ ಪರಿಶೀಲನೆಯ ಬಳಿಕ ಜೆಸಿಕಾ ಸಾವಿಗೆ ನೈಜ ಕಾರಣವೇನು ಎಂಬ ವಿಚಾರ ಬೆಳಕಿಗೆ ಬರಲಿದೆ.ಸದ್ಯ, ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ ನಂತರ ಅಸಲಿ ಕಾರಣ ಹೊರ ಬೀಳಲಿದೆ.

ಇದನ್ನೂ ಓದಿ: Good News:ರಾಜ್ಯದ ಈ ಮಹಿಳೆಯರಿಗೆ ದೊರೆಯಲಿದೆ ಭರ್ಜರಿ ರೂ.4000! ಬಂಪರ್ ಸಿಹಿ ಸುದ್ದಿ ನೀಡಿದ ಸರಕಾರ!!!

You may also like

Leave a Comment