Be Careful: ದಿನಂಪ್ರತಿ ಒಂದಲ್ಲ ಒಂದು ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಹೆಚ್ಚಿನ ವಂಚನೆ, ಸುಲಿಗೆ ಪ್ರಕರಣಗಳಿಗೆ ಮಹಿಳೆಯರನ್ನೇ( Ladies )ಖತರ್ನಾಕ್ ಕದೀಮರು ಟಾರ್ಗೆಟ್ ಮಾಡುವ ಪ್ರಕರಣಗಳೇ ಹೆಚ್ಚು. ಮಹಿಳೆಯರೇ ಎಚ್ಚರ (Be Careful)!!! ಒಬ್ಬಂಟಿಯಾಗಿ ನೀವೇನಾದರೂ ಓಡಾಡುತ್ತಿದ್ದರೆ, ಈ ವಿಚಾರ ತಿಳಿದುಕೊಳ್ಳಿ!! ಒಂಟಿ ಮಹಿಳೆಯರೇ ಈತನ ಟಾರ್ಗೆಟ್, ಅಷ್ಟಕ್ಕೂ ಈತ ಏನು ಮಾಡುತ್ತಿದ್ದ?
ಮಹಿಳೆಯರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಆರೋಪಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಆರೋಪಿ ಜೋಶ್ವಾ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ (Private Company)ಹೆಚ್ಆರ್ (HR)ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಜೋಶ್ವಾ ಎಂಬಾತ ಕೆಲಸ ತೊರೆದು ಸ್ಟಾರ್ಟ್ ಅಪ್ ಕಂಪೆನಿ(Start Up Company)ತೆರೆಯಲು ಮುಂದಾಗಿದ್ದಾನೆ.40 ಸಾವಿರ ರೂ. ಕೊಟ್ಟು ಗ್ರೇಟ್ ಜಾಬ್ ಹೆಸರಿನಲ್ಲಿ ಅಗ್ರಿಮೆಂಟ್ ಕೂಡ ಮಾಡಿಕೊಂಡಿದ್ದಾನೆ. ಆದರೆ ಅಂದುಕೊಂಡ ಹಾಗೆ ಗುರಿಯನ್ನು ತಲುಪಲು ಆಗದೇ ಇದ್ದಾಗ ಆತ ಹಿಡಿದ ಮಾರ್ಗವೇ ಸುಲಿಗೆ! ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದೊಯ್ಯಲು ಬರುವ ಒಂಟಿ ಮಹಿಳೆಯರನ್ನೇ ತನ್ನ ಕೃತ್ಯಕ್ಕೆ ಗುರಿಯಾಗಿಸಿಕೊಂಡಿದ್ದ ಆರೋಪಿ ಕೈಯಲ್ಲಿ ಬೀಗದ ಕೀ ಇರುವುದನ್ನ ಗಮನಿಸಿ ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದನಂತೆ.
ಮಹಿಳೆಯರ ನಿರಂತರ ಚಲನವಲನವನ್ನು ಗಮನಿಸಿಕೊಂಡು ಮಹಿಳೆಯರ ಮನೆಗೆ ನುಗ್ಗಿ ಚಾಕು ತೋರಿಸಿ ಹೇದರಿಸುತ್ತಿದ್ದ. ಇದೇ ಖಾಯಂ ಖಯಾಲಿ ರೂಢಿಸಿಕೊಂಡಿದ್ದ ಆರೋಪಿ ಆಗಸ್ಟ್ 21ರಂದು ಹೆಚ್ಎಸ್‌ಆರ್ ಲೇಔಟ್ನಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಖಾರದಪುಡಿ ಎರಚಿ ಆಕೆ ಕೈಯನ್ನು ಕುಯ್ದು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ. ಈ ಕುರಿತು ಮಹಿಳೆ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಇದರ ಅನುಸಾರ ಪೊಲೀಸರು ದರೋಡೆಕೋರನನ್ನು ಬಂಧಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ
ಇದನ್ನೂ ಓದಿ: ಕರಾವಳಿಯಲ್ಲಿ ಬಲೆಗೆ ಬಿದ್ದ ದೊಡ್ಡ ಗಾತ್ರದ ಬಂಗುಡೆ! ಎಷ್ಟು ಕೆಜಿ ಗೊತ್ತೇ!?
