Bengaluru: ಶಿಕ್ಷಕನೊಬ್ಬ (teacher) ಶಾಲೆಗೆ ಕುಡಿದು ಬಂದು ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಶಿಕ್ಷಕನನ್ನು ಸೋಂಪುರ ಹೋಬಳಿಯ ಗಂಟೆಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಕೃಷ್ಣಯ್ಯ ಎನ್ನಲಾಗಿದೆ.
ರಾಮಕೃಷ್ಣಯ್ಯ ಶಾಲೆಯಲ್ಲಿ ಕುಡಿದ ಅಮಲಿನಲ್ಲಿ ಮಕ್ಕಳ ಮುಂದೆ ಶರ್ಟ್ ಬಿಚ್ಚಿ, ಏನೇನೋ ಮಾತನಾಡಿದ್ದನು. ಈ ವಿಚಾರವನ್ನು ಮಕ್ಕಳು ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದಾರೆ. ಘಟನೆ ವಿಚಾರ ಗಮನಕ್ಕೆ ಬಂದ ತಕ್ಷಣ ಪೋಷಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶಾಲೆಗೆ ಬಂದ ಪೋಷಕರು ಹಾಗೂ ಗ್ರಾಮಸ್ಥರು ಶಿಕ್ಷಕನನ್ನು ಪ್ರಶ್ನಿಸಿದ್ದಾರೆ. ನಂತರ ಶಾಲೆಯಲ್ಲಿ ತಪಾಸಣೆ ನಡೆಸಿದಾಗ ಶಾಲೆಯ ಶೌಚಾಲಯದಲ್ಲಿ ಟೆಟ್ರಾಪ್ಯಾಕಿನ ಮಧ್ಯದ ಪಾಕೆಟ್‌ಗಳು ಹಾಗೂ ಪ್ಲಾಸ್ಟಿಕ್ ಲೋಟಗಳು ಪತ್ತೆಯಾಗಿದೆ. ಈ ಬಗ್ಗೆ ಪೋಷಕರು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಮುಂದೆ ಈ ರೀತಿ ಕುಡಿದು ಶಾಲೆಗೆ ಬರದಂತೆ ಎಚ್ಚರಿಕೆ ಕೊಟ್ಟು, ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ ಕಬಡ್ಡಿ ಆಟಗಾರ ಸ್ವರಾಜ್ ಸಾವಿಗೆ ಬಿಗ್ ಟ್ವಿಸ್ಟ್ ! ‘ ಮಧ್ಯಾಹ್ನ 2 ಗಂಟೆ ಡೆಡ್ ಲೈನ್ ‘ ರಹಸ್ಯ !!!
