Home » Bengaluru News: ನಡುರಸ್ತೆಯಲ್ಲೇ ಪಾನಮತ್ತ ಯುವತಿಯರ ಮಂಗನಾಟ! ಮದಿರೆಯ ಮತ್ತಲ್ಲಿ ಮಿಂದವರನ್ನು ನೋಡಲು ಮುಗಿಬಿದ್ದ ಜನ!!!

Bengaluru News: ನಡುರಸ್ತೆಯಲ್ಲೇ ಪಾನಮತ್ತ ಯುವತಿಯರ ಮಂಗನಾಟ! ಮದಿರೆಯ ಮತ್ತಲ್ಲಿ ಮಿಂದವರನ್ನು ನೋಡಲು ಮುಗಿಬಿದ್ದ ಜನ!!!

by Mallika
0 comments
Bengaluru News

Bengaluru News: ಬೆಂಗಳೂರಿನಲ್ಲಿ ಪಬ್‌, ಕ್ಲಬ್‌ ಎಂದು ಮೋಜು ಮಸ್ತಿ ಮಾಡಲೆಂದು ಜನ ಬರುತ್ತಾರೆ. ಹಾಗೆನೇ ಕುಡಿಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಕುಡಿದ ಮತ್ತಿನಲ್ಲಿ ಕೆಲವರು ಹೈಡ್ರಾಮವನ್ನೇ ಸೃಷ್ಟಿ ಮಾಡುತ್ತಾರೆ. ಅಂತಹುದೇ ಒಂದು ಘಟನೆ ಕೋರಮಂಗಲದಲ್ಲಿ ನಡೆದಿದೆ(Bengaluru News). ಅದು ಕೂಡಾ ಯುವತಿಯರಿಂದ (Alcohol WImen)

ಕೋರಮಂಗಲದಲ್ಲಿರುವ ಡ್ರಂಕನ್ ಡ್ಯಾಡಿ ಎಂಬ ಪಬ್‌ನಲ್ಲಿ ಹುಡುಗಿಯರು ಕಂಠ ಪೂರ್ತಿ ಕುಡಿದು, ಟೈಟ್‌ ಆಗಿ ರಾತ್ರಿ 12.30 ರ ಸುಮಾರಿಗೆ ರಸ್ತೆಗಿಳಿದಿದ್ದು, ಹೈಡ್ರಾಮನ್ನೇ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ವರ್ತಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ. ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ.

ಓರ್ವ ಯುವತಿ ನಡು ರಸ್ತೆಯಲ್ಲಿ ಮಲಗಿದ್ದರೆ, ಇನ್ನೋರ್ವಾಕೆ ಕಾರಿನ ಮೇಲೆ ಕುಳಿತುಕೊಂಡಿದಾಳೆ. ಇನ್ನೊಬ್ಬಾಕೆ ಎಲ್ಲೆಂದರಲ್ಲಿ ಅಲ್ಲಿ ಬಿದ್ದು ಒದ್ದಾಡಿದ್ದಾಳೆ. ಇವರ ಈ ಕೆಲಸದಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಇದನ್ನೆಲ್ಲ ನೋಡುತ್ತಿದ್ದ ಜನರು ವೀಡಿಯೋ ಮಾಡಿದ್ದಾರೆ. ನಂತರ ಈ ಎಲ್ಲಾ ಗಲಾಟೆ ಸುದ್ದಿ ತಿಳಿದ ಕೋರಮಂಗಲ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಯುವತಿಯರಿಗೆ ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆ.

ಇದನ್ನೂ ಓದಿ: A manju: ಸಿಎಂ ಇಬ್ರಾಹಿಂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಎ ಮಂಜು – ಹೀಗೇಕೆ ಮಾಡಿದ್ರು ಇಬ್ರಾಹಿಂ !!

You may also like

Leave a Comment