BJP Demands for CBI Enquiry: ಗುತ್ತಿಗೆದಾರರ ಸಂಘದ (Contractors Association) ಉಪಾಧ್ಯಕ್ಷ ಅಂಬಿಕಾಪತಿ ಅವರ ಮನೆ ಮೇಲೆ ಐಟಿ ದಾಳಿ (IT Raid in Bangalore) ನಡೆದಾಗ ಪತ್ತೆಯಾದ ಭರ್ಜರಿ 42 ಕೋಟಿ ಹಣದ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಬಿಜೆಪಿ (BJP Demands for CBI Enquiry) ಆಗ್ರಹಿಸಿದೆ.
ಈ ಕುರಿತು ಸಚಿವ ಆರ್.ಅಶೋಕ್ (R.Ashok) ಅವರು ಕತ್ತಲಲ್ಲಿ ಕಾಂಚಾಣದ ಮಾಯೆ ನಡೆಯುತ್ತಿದೆ, ಕಾಂಗ್ರೆಸಿಗರು ಕತ್ತಲೆ ಭಾಗ್ಯ ನೀಡಿದ್ದಾರೆ, ಕರ್ನಾಟಕ ಭ್ರಷ್ಟಾಚಾರದ ಕೂಪ ಎಂಬ ಮಾತುಗಳನ್ನು ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರಕಾರವು ಪಂಚರಾಜ್ಯ ಚುನಾವಣೆಗೆ ಹಣ ಕೊಡುವುದಾಗಿ ಕೇಂದ್ರ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಧ್ಯ ಪ್ರದೇಶಕ್ಕೆ 600 ಕೋಟಿ, ರಾಜಸ್ಥಾನಕ್ಕೆ 200 ಕೋಟಿ, ಛತ್ತೀಸ್‌ಗಢಕ್ಕೆ 200 ಕೋಟಿ, ತೆಲಂಗಾಣಕ್ಕೆ 600 ಕೋಟಿ ಮತ್ತು ಮಿಜೋರಾಂಗೆ 100 ಕೋಟಿ ರೂ. ಕೊಟ್ಟು ಸೋನಿಯಾ ಗಾಂಧಿಯವರ ಶಹಬ್ಬಾಸ್‍ಗಿರಿ ಪಡೆಯಲು ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಆರ್. ಅಶೋಕ್ ಹೇಳಿರುವುದಾಗಿ ಮಾಧ್ಯಮವೊಂದು ಪ್ರಕಟ ಮಾಡಿದೆ.
ತಮ್ಮ ಬಾಕಿ ಹಣ ಬಿಡುಗಡೆ ಮಾಡಲು ಗುತ್ತಿಗೆದಾರರು ಕೇಳುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಹೇಳುತ್ತಿದ್ದರೂ, ವಿಷ ಕುಡಿಯುತ್ತೇವೆ ಎಂಬ ಬೆದರಿಕೆಗೂ ಜಗ್ಗದೇ, ಇದೀಗ ಪಂಚ ರಾಜ್ಯಗಳ ಚುನಾವಣೆಗೆ ಹಣ ಬಿಡುಗಡೆ ಮಾಡಲಾಗಿದೆ. ಕಾಂಚಾಣ ಕುಣಿತ ಶುರುವಾಗಿದೆ, ಎಷ್ಟು ಕಾಕತಾಳೀಯ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಅಂಬಿಕಾಪತಿ ಮನೆಯಲ್ಲಿ ಹಣ ಇಟ್ಟು ತೆಲಂಗಾಣಕ್ಕೆ ಕಳಿಸಲು ತಯಾರಿ ಮಾಡಿತ್ತೆಂದು ತೆಲಂಗಾಣದ ಹಣಕಾಸು ಸಚಿವರೂ ನೇರ ಆಪಾದನೆ ಮಾಡಿದ್ದಾರೆಂದು ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ: ಸಿಟ್ಟುಗೊಂಡು ಸಾಯಲು ಬಂದ ಹೆಂಡತಿಯ ಸಮಾಧಾನ ಪಡಿಸಿ, ರೈಲ್ವೇ ಹಳಿಯಲ್ಲಿ ತಬ್ಬಿಕೊಂಡ ಪತಿ! ಆದರೆ ವಿಧಿ…
