Bengaluru: ತುಳುನಾಡ ಜವನೆರ್ ಬೆಂಗಳೂರು(ರಿ) ಎಂಬ ಸಂಘಟನೆಯ ವತಿಯಿಂದ ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಅತ್ತಿಗುಪ್ಪೆ ವಿಜಯನಗರ ಬಂಟರ ಸಂಘದ ಆವರಣದಲ್ಲಿ ಅಸ್ಟೆಮಿದ ಐಸಿರ ಎಂಬ ಕಾರ್ಯಕ್ರಮ ಸಫ್ಟೆಂಬರ್ 24 ರವಿವಾರ ಬೆಳಗ್ಗೆ 9 ರಿಂದ ರಾತ್ರಿ 10 ರವರೆಗೆ ನಡೆಯಲ್ಲಿದ್ದು ಈ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಬೋಳದ ಗುತ್ತುವಿನ ಶ್ರೀ ಸತೀಶ್ ಜಗದೀಶ್ ಶೆಟ್ಟಿ ಮಾಲಕತ್ವದ ಪ್ರಸಿದ್ದ ಕಂಬಳದ ಕೋಣಗಳಾದ ದೋನಿ ಹಾಗೂ ಬೊಳ್ಳೆಯನ್ನು ಸನ್ಮಾನಕ್ಕಾಗಿ ಕರೆದು ತರುವ ಯೋಜನೆ ರೂಪಿಸಲಾಗಿದೆ.
ಅದೇ ರೀತಿ ಮಾಲಕರಿಗೂ ಕೂಡಾ ಗಣ್ಯರ ಸಮ್ಮುಖ ವೇದಿಕೆಯ ಸನ್ಮಾನ ನಡೆಯಲಿದೆ.
ಕಂಬುಳ ಕ್ಷೇತ್ರದ ಪ್ರಸಿದ್ದ ಕೋಣಗಳಾದ ದೋನಿ ಹಾಗೂ ಬೊಳ್ಳೆ ಬರುತ್ತಿರುವುದು ಬೆಂಗಳೂರಿನ ಯುವಕರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಇದನ್ನೂ ಓದಿ: 4 ಕೋಟಿ ರೂ ಲ್ಯಾಂಬೋರ್ಗಿನಿ ಕಾರಿನ ಮೇಲೆ ಹತ್ತಿ ಕುಳಿತ ಶ್ರೀರಾಮ, ಇದು ವಿಶ್ವದಲ್ಲೇ ಮೊದಲು ಅಂತೆ !
