Bengaluru: ಬೆಂಗಳೂರಿನ ಪ್ರತಿಷ್ಠಿತ ಲುಲು ಮಾಲ್‌ನಲ್ಲಿ ಯುವತಿಯೋರ್ವಳ ಹಿಂಭಾಗ ಮುಟ್ಟಿ ವಿಕೃತಿ ಮೆರೆದ ವಿಡಿಯೋವೊಂದು ವೈರಲ್ ಆಗಿತ್ತು, ಇದಕ್ಕೆ ಸಂಬಂಧಪಟ್ಟಂತೆ ದೂರು ಕೂಡಾ ದಾಖಲಾಗಿತ್ತು.ಪೊಲೀಸರು ವೀಡಿಯೋ ಆಧರಿಸಿ ಆರೋಪಿಯ ಗುರುತನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿ ಬಸವೇಶ್ವರನಗರ ನಿವಾಸಿ ಅಶ್ವಥ್ ನಾರಾಯಣ್ (60) ಎಂದು ಗುರುತಿಸಲಾಗಿದೆ.
ಆರೋಪಿ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿದ್ದು, ಇದೀಗ ನಿವೃತ್ತಿಹೊಂದಿದ್ದರು. ಎಂಟು ಕಳೆದ ಹಿಂದೆ ಅಶ್ವಥ್ ನಾರಾಯಣ್ ನಿವೃತ್ತನಾಗಿದ್ದು, ಇದೀಗ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ ಎಂದು ವರದಿಯಾಗಿದೆ. ಮಾಗಡಿ ರೋಡ್ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್- ಹೊಸ ನಿಯಮದಂತೆ ಮೂಲ ವೇತನದಲ್ಲಿ ಭಾರೀ ಏರಿಕೆ !!
