Bengaluru rain updates: ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಕೆಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ ಕಾರು ಮುಳುಗಡೆಗೊಂಡು ಟೆಕ್ಕಿ ಸಾವನ್ನಪ್ಪಿದ ಪ್ರಕರಣ ಸಂಬಂಧಿಸಿ ಕಾರು ಚಾಲಕನನ್ನು ಇಂದು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಕೆಆರ್ ಸರ್ಕಲ್ನ ಅಂಡರ್ಪಾಸ್ನಲ್ಲಿ (Bengaluru rain updates) ನೀರು ನಿಂತಿದ್ದರೂ ಕಾರು ಚಾಲನೆ ಮಾಡಿದ್ದು, ಪ್ರಯಾಣಿಕರ ಬೇಡ ಎಂದರೂ ಚಾಲಕ ಮುಂದೆ ಸಾಗಿದ್ದಾನೆ ಅಲ್ಲದೇ ಆ ಕಾರಿನಲ್ಲಿ ಸುಮಾರು 6 ಜನರಿದ್ದರು ಎಂದು ತಿಳಿಯಲಾಗಿದೆ.
ನಿನ್ನೆ ಸಂಜೆ ಹೊತ್ತಿಗೆ ಧಾರಾಕಾರ ಮಳೆ ಸುರಿದಿದ್ದು, ಮಳೆಯಿಂದಾಗಿ ಕೆಆರ್ ಸರ್ಕಲ್ನ ಅಂಡರ್ಪಾಸ್ನಲ್ಲಿ ಕಾರು ಸಂಪೂರ್ಣ ಮುಳುಗಿತ್ತು. ಕೂಡಲೇ ಪೊಲೀಸರು ರಕ್ಷಣೆಗೆ ಮುಂದಾಗಿದ್ದು, ಆರು ಮಂದಿಯನ್ನು ರಕ್ಷಣೆ ಮಾಡಲಾಗಿತ್ತು ಆದ್ರೆ ತೀವ್ರ ಅಸ್ವಸ್ಥಗೊಂಡ ಭಾನು ರೇಖಾ ಎಂಬವರು ಮೃತಪಟ್ಟಿದ್ದು ಸಾವಿಗೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ,ಕಾರಿನಿಂದ ಇಳಿಯುವುದಾಗಿ ಹೇಳಿದ್ರೂ ತಾನೆ ಕರೆದೊಯ್ಯುವುದಾಗಿ ಚಾಲಕನ ಹೇಳಿದ್ದನು ಎಂದು ಕುಟುಂಬಸ್ಥರು ದೂರಿದ್ದಾರೆ. ಅಲ್ಲದೇ ಮಳೆಯಿಂದ ಸಿಲಿಕಾನ್ ಸಿಟಿಯಲ್ಲಿ ಪದೇ ಪದೇ ಇಂತಹ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ ಇದಕ್ಕೆ ಪ್ರಮುಖ ಕಾರಣ ಬಿಬಿಎಂಪಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ದೂರಿನ್ವಯ ಇಂದು ಕಾರು ಚಾಲಕನನ್ನು ಬಂಧನ ಮಾಡಲಾಗಿದೆ. ಬಂಧಿತ ಆರೋಪಿ ಹರೀಶ್ ಎಂದು ತಿಳಿಯಲಾಗಿದೆ.
ಇದನ್ನು ಓದಿ: Marriage: ಇನ್ನೇನು ಕೆಲವೇ ಗಂಟೆಯಿರುವಾಗಲೇ ವಧುವಿಗೆ ಗುಂಡು ಹಾರಿಸಿದ ಪೇದೆ! ನಂತರ ಏನಾಯ್ತು?
