Dharmasthala Sowjanya case: ಸೌಜನ್ಯ ಚಳವಳಿ ಇದೀಗ ಕೇವಲ ಬೆಳ್ತಂಗಡಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ರಾಜ್ಯದ ಮೂಲೆ ಮೂಲೆಗಳಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Dharmasthala Sowjanya case) ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಪಾದಯಾತ್ರೆಯಲ್ಲಿ ಬೀದಿ ಹೆಣ್ಣು ನಾಯಿಯೊಂದು ಭಾಗವಹಿಸಿ ಅಚ್ಚರಿ ಮೂಡಿಸಿದೆ.
ಸೌಜನ್ಯ ಹೋರಾಟದ ಪ್ರಯುಕ್ತ ಕೆಆರ್‌ಎಸ್ ಪಕ್ಷದಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಯುತ್ತಿದೆ. ಮೊನ್ನೆ ಆಗಸ್ಟ್ 24ರಂದು ಬೆಳ್ತಂಗಡಿಯಿಂದ ಹೊರಟ ಪಾದಯಾತ್ರೆ ಮೊದಲು ಧರ್ಮಸ್ಥಳ ತಲುಪಿತ್ತು. ನಂತರ ಉಜಿರೆಯ ಮೂಲಕ ಚಾರ್ಮಾಡಿ ರೂಟ್ ನಲ್ಲಿ ಸಾಗಲು ವಾಪಸ್ ಬರುವಾಗ ಪಾದಯಾತ್ರೆಯನ್ನು ನಾಯಿಯೊಂದು ಸೇರಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಹೌದು ಸದ್ಯ ಪಾದಯಾತ್ರೆ ಚಾರ್ಮಾಡಿ ಘಟ್ಟವನ್ನು ದಾಟಿ ಮೂಡಿಗೆರೆ, ಭಾಗಕ್ಕೆ ಬಂದು ತಲುಪಿದೆ ಸುಮಾರು 80 ಕಿಲೋ ಮೀಟರ್ ಗಿಂತಲೂ ಅಧಿಕ ದೂರವನ್ನು ಪಾದಯಾತ್ರೆಗಳು ಕ್ರಮಿಸಿದ್ದಾರೆ ಆದರೆ ಧರ್ಮಸ್ಥಳದಿಂದ ಹೊರಡುವಾಗಲಿ ಒಂದು ಹೆಣ್ಣು ನಾಯಿ ಪಾತ್ರ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ಆಶ್ಚರ್ಯ ಮೂಡಿಸಿದೆ. ಈ ಹೆಣ್ಣು ಶ್ವಾನಕ್ಕೆ ಪ್ರಕೃತಿ ಎಂದು ಹೆಸರಿಡಲಾಗಿದ್ದು ಅದು ಎಲ್ಲ ಪಾದಯಾತ್ರಿಗಳ ರೀತಿಯಲ್ಲಿಯೇ ನಡೆದುಕೊಂಡು ಬರುತ್ತಿದೆ. ಮೊದಲಿಗೆ ನೇತ್ರಾವತಿ ಸ್ನಾನಘಟ್ಟದ ಬಳಿ, ಅಂದು ಸೌಜನ್ಯ ಕೊಟ್ಟ ಕೊನೆಯ ಬಾರಿಗೆ ರಸ್ತೆಯಲ್ಲಿ ಕಾಣಿಸಿಕೊಂಡ ಪ್ರದೇಶದ ಭಾಗದಲ್ಲಿ ಈ ಹೆಣ್ಣು ನಾಯಿ ಎಲ್ಲ ಜನರ ಜೊತೆ ಪಾದಯಾತ್ರೆಗೆ ಸೇರಿಕೊಂಡದ್ದು ಮತ್ತೊಂದು ವಿಶೇಷ.
ಅದೇ ಶುರು, ಇದೀಗ ಒಂದು ವಾರ ನಡೆದ ನಂತರ ಕೂಡ ‘ ಪ್ರಕೃತಿ’ ಗೆ ದಣಿವಾಗಿಲ್ಲ. ನಿಜಕ್ಕೂ ಪಾದಯಾತ್ರೆಯ ಮುಂಚೂಣಿಯಲ್ಲಿ ನಡೆಯುತ್ತಿದ್ದಾಳೆ ಪ್ರಕೃತಿ. ಈ ಹೆಣ್ಣು ನಾಯಿಗೆ ದಾರಿ ಮಧ್ಯ ಪ್ರಕೃತಿ ಎಂದು ಹೆಸರಿಡಲಾಗಿದೆ. ಪಾದಯಾತ್ರಿಗಳು ಉಣ್ಣಲು ಕೂತಾಗ ಪ್ರಕೃತಿ ಕೂಡ ಊಟ ಮಾಡುತ್ತಾಳೆ. ಸುಧೀರ್ಘ ನಡಿಗೆಯ ಸುಸ್ತನ್ನು ಕಡಿಮೆ ಮಾಡುವಂತಿದೆ ಈ ಹೆಣ್ಣು ನಾಯಿಯ ನಡವಳಿಕೆ.
ಇದನ್ನೂ ಓದಿ: ಶಿವಮೊಗ್ಗಕ್ಕೆ ಬಂದೇ ಬಿಟ್ಟ ಮೊದಲ ವಿಮಾನ: ಅರೇ, ಮೊದಲ ಪ್ರಯಾಣಿಕ ಇವರೇನಾ ?!
