Home » ಪಾರಂಪರಿಕ ಕಲೆಗಳಾದ ಡೋಲು,ನಾಗಸ್ವರ ತರಬೇತಿಗೆ ಅರ್ಜಿ ಆಹ್ವಾನ

ಪಾರಂಪರಿಕ ಕಲೆಗಳಾದ ಡೋಲು,ನಾಗಸ್ವರ ತರಬೇತಿಗೆ ಅರ್ಜಿ ಆಹ್ವಾನ

by Praveen Chennavara
179 comments

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2021-22ನೇ ಸಾಲಿಗೆ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ 4 ವರ್ಷದ ತರಬೇತಿಯನ್ನು ಉಚಿತ ಊಟ, ವಸತಿ, ಶಿಕ್ಷಣ ಮತ್ತು ತರಬೇತಿ ಭತ್ಯೆಯೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಆಯಾ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅ.16 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ-8050770004ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

You may also like

Leave a Comment