Home » HD Revanna: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಹೆಚ್‌.ಡಿ ರೇವಣ್ಣ ವಿರುದ್ಧದ ಪ್ರಕರಣ ಕೈಬಿಟ್ಟ ಕೋರ್ಟ್

HD Revanna: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಹೆಚ್‌.ಡಿ ರೇವಣ್ಣ ವಿರುದ್ಧದ ಪ್ರಕರಣ ಕೈಬಿಟ್ಟ ಕೋರ್ಟ್

0 comments

HD Revanna: ಹೊಳೆನರಸೀಪುರದ ಸಂತ್ರಸ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣಗೆ (HD Revanna) ಬಿಗ್‌ ರಿಲೀಫ್‌ ಸಿಕ್ಕಿದೆ. ರೇವಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನ ಬೆಂಗಳೂರಿನ ಕೋರ್ಟ್‌ (Bengaluru Court) ಕೈಬಿಟ್ಟಿದೆ.

ಹೌದು. ಹೆಚ್‌.ಡಿ ರೇವಣ್ಣನನ್ನ ಆರೋಪ ಮುಕ್ತಗೊಳಿಸಿ 42ನೇ ಎಸಿಜೆಎಂ ಕೋರ್ಟ್‌ ಇಂದು ಆದೇಶ ಹೊರಡಿಸಿದೆ. ವಿಳಂಬವಾಗಿ ದೂರು ದಾಖಲಿಸಲಾಗಿದೆ ಎಂದು ಕಾರಣ ನೀಡಿ ಕೋರ್ಟ್ ಪ್ರಕರಣ ರದ್ದುಗೊಳಿಸಿದೆ.

ಪ್ರಕರಣದಲ್ಲಿ, ರೇವಣ್ಣ ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸಿ ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಮನೆಯ ಸ್ಟೋರ್ ರೂಮಿನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಪ್ರಜ್ವಲ್ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆಯನ್ನು ಮುಟ್ಟುತ್ತಿದ್ದರು. ಇದೇ ರೀತಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆ ಪೊಲೀಸರಿಗೆ ಹೊಳೇನರಸಿಪುರ ಠಾಣೆಗೆ 2024ರ ಏಪ್ರಿಲ್‌ನಲ್ಲಿ ದೂರು ನೀಡಿದ್ದರು.ಮಹಿಳೆಯ ದೂರಿನ ಅನ್ವಯ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ದ ಐಪಿಸಿ ಸೆಕ್ಷನ್‌ 354 ಎ ಅಡಿಯಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಇದರ ತನಿಖೆ ನಡೆಸಿದ್ದರು. ಈ ಮಧ್ಯೆ ಪ್ರಕರಣದಿಂದ ತಮ್ಮನ್ನ ಕೈಬಿಡುವಂತೆ ಕೋರಿ ರೇವಣ್ಣ ಕೋರ್ಟ್‌ ಮೆಟ್ಟಿಲೇರಿದ್ದರು. ವಾದ – ಪ್ರತಿವಾದಗಳನ್ನು ಪರಿಶೀಲಿಸಿದ್ದ ಕೋರ್ಟ್‌ ವಿಳಂಬವಾಗಿ ದೂರು ದಾಖಲಿಸಲಾಗಿದೆ. ಜೊತೆಗೆ ಪ್ರಕರಣದ ವಿಚಾರಣೆಯೂ ಕೂಡ ತಡವಾಗಿದೆ ಎಂಬ ಕಾರಣ ನೀಡಿ ರೇವಣ್ಣರನ್ನ ಪ್ರಕರಣದಿಂದ ಕೈಬಿಟ್ಟಿದೆ.

You may also like