Home » JDS: ಜೆಡಿಎಸ್‌ಗೆ 25ರ ಸಂಭ್ರಮ; ರಜತ ಮಹೋತ್ಸವ ಆಚರಣೆ: ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ರಿಲೀಸ್

JDS: ಜೆಡಿಎಸ್‌ಗೆ 25ರ ಸಂಭ್ರಮ; ರಜತ ಮಹೋತ್ಸವ ಆಚರಣೆ: ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ರಿಲೀಸ್

0 comments

JDS: ಜೆಡಿಎಸ್‌ಗೆ ಬೆಳ್ಳಿ ಹಬ್ಬದ ಸಂಭ್ರಮ. ಜಾತ್ಯತೀತ ಜನತಾ ದಳ ಪಕ್ಷ ಸ್ಥಾಪನೆ ಆಗಿ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ರಜತ ಮಹೋತ್ಸವ ಆಚರಣೆ ಮಾಡಲಾಯಿತು. ಬೃಹತ್ ಸಮಾವೇಶ ಜೆಪಿ ಭವನದಲ್ಲಿ ನಡೆಯಿತು.

ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರು, ಪಕ್ಷದ ನಾಯಕರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದರು.ರೈತ ಗೀತೆ ಗಾಯನ ಮೂಲಕ ಕಾರ್ಯಕ್ರಮಕ್ಕೆ ಆರಂಭಿಸಲಾಯಿತು.

ಜೆಡಿಎಸ್ ಶಾಲು ತಿರುಗಿಸಿ ದೇವೇಗೌಡರು, ನಾಯಕರು, ಕಾರ್ಯಕರ್ತರ ಸಂಭ್ರಮಾಚರಣೆ ಮಾಡಿದರು. ದೀಪ ಬೆಳಗಿ ಸಮಾವೇಶಕ್ಕೆ ದೇವೇಗೌಡ, ಕುಮಾರಸ್ವಾಮಿ ಮತ್ತು ಗಣ್ಯರು ಚಾಲನೆ ನೀಡಿದರು. ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ಬಿಡುಗಡೆ ಮಾಡಲಾಯಿತು. ಜೆಡಿಎಸ್ ಬಗ್ಗೆ ಮಾಹಿತಿ ಪಡೆಯುವ ವಾಟ್ಸಾಪ್ ಲೈನ್ 9964002028 ನಂಬರ್ ಬಿಡುಗಡೆ ಮಾಡಲಾಯಿತು. ದೇವೇಗೌಡರ ಜೀವನ, ಸಾಧನೆ ಮತ್ತು ಕುಮಾರಸ್ವಾಮಿ ಸಾಧನೆ, ಪಕ್ಷ ನಡೆದು ಬಂದ ಹಾದಿ ಬಗ್ಗೆ ವಿಡಿಯೋ ರಿಲೀಸ್ ಮಾಡಲಾಯಿತು.

You may also like