Home » Mangaluru- Surathkal: 20 ನಿಮಿಷ ಪ್ರಯಾಣಿಸಲು ಒಂದು ರೈಲಿಗೆ 45 ನಿಮಿಷ, ಮತ್ತೊಂದಕ್ಕೆ 2 ಗಂಟೆ !! ಅರೆ ಇದೇನಿದು ವಿಚಿತ್ರ?

Mangaluru- Surathkal: 20 ನಿಮಿಷ ಪ್ರಯಾಣಿಸಲು ಒಂದು ರೈಲಿಗೆ 45 ನಿಮಿಷ, ಮತ್ತೊಂದಕ್ಕೆ 2 ಗಂಟೆ !! ಅರೆ ಇದೇನಿದು ವಿಚಿತ್ರ?

1 comment
Mangaluru- ಸ್

Mangaluru- Surathkal: ರೈಲು ಪ್ರಯಾಣ ಎಂದರೆ ಎಲ್ಲರಿಗೂ ಬಲು ಪ್ರೀತಿ. ಆರಾಮದಾಯಕವಾಗಿ ಹಾಗೂ ವೇಗವಾಗಿ ಚಲಿಸಿ, ಶೀಘ್ರದಲ್ಲಿ ತಲುಪುವುದರಿಂದ ಹೆಚ್ಚಿನವರು ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಯೋಚನೆಗಳೊಂದಿಗೆ ರೈಲು ಹತ್ತಿದರೆ ಅದು ಕಾಲಿ 20 ಕಿ. ಮೀ ತಲುಪಲು 2 ಗಂಟೆ ತೆಗೆದುಕೊಂಡರೆ ಹೇಗಾಗಬೇಡ ಹೇಳಿ?

ಒಂದು 20 km ದೂರ ಇರುವಂತ ಪ್ರದೇಶವನ್ನು ತಲುಪಲು ರೈಲೊಂದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂದು ಅಂದಾಜಿಸಿದರೆ ಅರ್ಧ ಗಂಟೆ ಬೇಕಾಗಬಹುದು. ಇಲ್ಲ ನಿಧಾನವಾಗಿ ಚಲಿಸುವ ರೈಲಿನಲ್ಲಿ 45 ನಿಮಿಷ ಇಲ್ಲ ಒಂದು ಹೆಚ್ಚೆಂದರೆ ಒಂದು ಗಂಟೆ ಸಮಯ ಹಿಡಿಯಬಹುದು. ಆದರೆ ಇಲ್ಲೊಂದು ರೈಲು ಬರೋಬ್ಬರಿ 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಇದರಿಂದ ಪ್ರಯಾಣಿಕರಂತೂ ಫುಲ್ ತಂಡಾ ಹೊಡೆದಿದ್ದಾರೆ.

ಹೌದು, ಕರಾವಳಿಯನ್ನು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಬೆಂಗಳೂರು (ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌)-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲನ್ನು ಮುರ್ಡೇಶ್ವರಕ್ಕೆ ವಿಸ್ತರಣೆ ಮಾಡಲಾಗಿದೆ. ವಿಸ್ತೃತ ವೇಳಾಪಟ್ಟಿಯಲ್ಲಿ ರೈಲು ಓಡಾಡಲು ಆರಂಭಿಸಿ ಒಂದು ವಾರವಾಗಿವೆ. ಈ ನಡುವೆ ರೈಲು ಪ್ರಯಾಣಿಕರು ಹಾಗೂ ರೈಲ್ವೇ ಪ್ರಯಾಣಿಕರ ಸಂಘಗಳು ಒಂದು ಪ್ರಮುಖವಾದ ಪ್ರಶ್ನೆಯನ್ನು ಎತ್ತಿದ್ದಾರೆ.

ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರು ಸೆಂಟ್ರಲ್‌ಗೆ ಬರುತ್ತಿದ್ದ ರೈಲು ಅಲ್ಲಿಂದ ಮುರ್ಡೇಶ್ವರಕ್ಕೆ ಪ್ರಯಾಣ ಮಾಡಬೇಕು. ಆದರೆ, ಮಂಗಳೂರು ಸೆಂಟ್ರಲ್‌ನಿಂದ 20 ಕಿ.ಮೀ ದೂರವಿರುವ ಸುರತ್ಕಲ್‌ಗೆ (Mangaluru- Surathkal)ಪ್ರಯಾಣ ನಡೆಸಲು ಈ ರೈಲು ಬರೋಬ್ಬರಿ 2 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಇದನ್ನು ಪ್ರಯಾಣಿಕರು ಕೂಡ ಪ್ರಶ್ನೆ ಮಾಡುತ್ತಿದ್ದಾರೆ.

ಮಂಗಳೂರು ಸೆಂಟ್ರಲ್-ಮುಂಬೈ ಎಲ್‌ಟಿಟಿ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಸೇರಿದಂತೆ ಇತರ ರೈಲುಗಳು ಈ ದೂರವನ್ನು ಕ್ರಮಿಸಲು ಕೇವಲ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ಅವೈಜ್ಞಾನಿಕ ಎಂದು ಬಣ್ಣಿಸಿರುವ ಕುಂದಾಪುರ ರೈಲು ಪ್ರಯಾಣಿಕ ಹಿತರಕ್ಷಣಾ ಸಮಿತಿ, ಮಂಗಳೂರು ಮತ್ತು ಮುರ್ಡೇಶ್ವರ ನಡುವಿನ ವೇಳಾಪಟ್ಟಿಯನ್ನು ಕೂಡಲೇ ಬಿಗಿಗೊಳಿಸುವಂತೆ ರೈಲ್ವೆ ಸಚಿವಾಲಯವನ್ನು ಒತ್ತಾಯಿಸಿದೆ.

ರೈಲು ಸೇವೆಗಳಿಗೆ ಮಂಗಳೂರು ಜಂಕ್ಷನ್‌ನಲ್ಲಿ (MAJN) ವಾಣಿಜ್ಯ ನಿಲುಗಡೆ ಇಲ್ಲ. ಹಾಗಿದ್ದರೂ, 8.55 ಗಂಟೆಗೆ ಮಂಗಳೂರು ಜಂಕ್ಷನ್‌ ಮೂಲಕ ಹಾದುಹೋದಾಗ, ರೈಲು ನಂ. 16585 ಈ ಜಂಕ್ಷನ್‌ನ ಹೊರಭಾಗದಲ್ಲಿ 40 ನಿಮಿಷಗಳ ಕಾಲ ಮತ್ತು ಸುರತ್ಕಲ್‌ನಲ್ಲಿ ಇನ್ನೂ 40 ನಿಮಿಷಗಳ ಕಾಲ ನಿಲ್ಲಿಸಿ ಇಡಲಾಗುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕಟ್ಟುನಿಟ್ಟಿನ ವೇಳಾಪಟ್ಟಿಯಡಿಯಲ್ಲಿ ರೈಲು ಸಂಚಾರವನ್ನು ಕಾರವಾರದವರೆಗೆ ವಿಸ್ತರಿಸಿದರೆ ನೂರಾರು ಪ್ರವಾಸಿಗರು ಮೈಸೂರು, ಮುರ್ಡೇಶ್ವರ, ಗೋಕರ್ಣ ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳ ನಡುವೆ ಪ್ರಯಾಣಿಸಲು ಅನುಕೂಲವಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Jaya mrutyunjayala swamyji: ಯಡಿಯೂರಪ್ಪ, ಬೊಮ್ಮಾಯಿ ಅವರಿಂದಲೇ ಭಾರೀ ಮೋಸ – ಬಿಜೆಪಿ ಸೋಲಿನ ಸ್ಪೋಟಕ ಕಾರಣ ತೆರೆದಿಟ್ಟ ಜಯಮೃತ್ಯುಂಜಯ ಸ್ವಾಮಿಜಿ

You may also like

Leave a Comment