Mangaluru and Bengaluru Flights:ವಿಮಾನದಲ್ಲಿ(Flights)ಪ್ರಯಾಣ ಬೆಳೆಸುವ ಪ್ರಯಾಣಿಕರೇ ಗಮನಿಸಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಬುಧವಾರದಿಂದ ಮಂಗಳೂರು-ಬೆಂಗಳೂರು (Mangaluru and Bengaluru Flights)ನಡುವೆ ಪ್ರಯಾಣ ಆರಂಭಿಸಿದೆ. ಮಂಗಳೂರು-ಬೆಂಗಳೂರು ನಡುವೆ ಪ್ರತಿದಿನ ಏಳು ವಿಮಾನ ಸಂಚರಿಸಲಿದೆ.
ಎರಡನೇ ಎಐಇ ವಿಮಾನ ಐಎಕ್ಸ್ 1795 ಕಣ್ಣೂರು-ಬೆಂಗಳೂರು-ಮಂಗಳೂರು ನಡುವೆ ಯಾನ ಆರಂಭಿಸಿದೆ. ಐಎಕ್ಸ್ 1795 ವಿಮಾನವು ಕಣ್ಣೂರಿನಿಂದ ಸಂಜೆ 4.30ಕ್ಕೆ ಹೊರಟು ಸಂಜೆ 5.50ಕ್ಕೆ ಬೆಂಗಳೂರು ತಲುಪಿದೆ. ಬೆಂಗಳೂರಿನಿಂದ ಸಂಜೆ 6.25ಕ್ಕೆ ಪ್ರಯಾಣ ಆರಂಭಿಸಿ ರಾತ್ರಿ 7.35ಕ್ಕೆ ಮಂಗಳೂರಿಗೆ ತಲುಪಿದೆ. ಇದೇ ವಿಮಾನ ಐಎಕ್ಸ್ 792 ಆಗಿ ಸಂಚಾರ ನಡೆಸಲಿದೆ. ಬೆಂಗಳೂರು ಮೂಲಕ ತಿರುವನಂತಪುರಕ್ಕೆ ತೆರಳುವ ವಿಮಾನ ಇದಾಗಿದ್ದು, ಮಂಗಳೂರಿನಿಂದ ರಾತ್ರಿ 8.15ಕ್ಕೆ ಪ್ರಯಾಣ ಬೆಳೆಸಿ ರಾತ್ರಿ 9.30ಕ್ಕೆ ಬೆಂಗಳೂರನ್ನು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 10.20ಕ್ಕೆ ಹೊರಟು ರಾತ್ರಿ 11.25ಕ್ಕೆ ಕೇರಳದ ತಿರುವನಂತಪುರ ತಲುಪಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಇದನ್ನೂ ಓದಿ: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್- ಇನ್ನು ಈ ಜಿಲ್ಲೆಯ ಯಜಮಾನಿಯರಿಗೆ ಮೊದಲು ಬರುತ್ತೆ ‘ಗೃಹಲಕ್ಷ್ಮೀ’ ದುಡ್ಡು
