Home » ಲಿಯಾಖತ್ ಅಲಿಖಾನ್ ಕೊಲೆ ಪ್ರಕರಣ : ಆರೋಪಿ ಪತ್ತೆ ,ಸ್ಪೋಟಕ ತಿರುವು

ಲಿಯಾಖತ್ ಅಲಿಖಾನ್ ಕೊಲೆ ಪ್ರಕರಣ : ಆರೋಪಿ ಪತ್ತೆ ,ಸ್ಪೋಟಕ ತಿರುವು

by Praveen Chennavara
0 comments

Liaquat Ali Khan murder :ಬೆಂಗಳೂರು : ಜಿಮ್ ಗೆ ಹೋಗಿ ಬಳಿಕ ನಾಪತ್ತೆಯಾಗಿ ,ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಬೆಂಗಳೂರು ನಾಯಂಡಹಳ್ಳಿ ಲಿಯಾಖತ್ ಅಲಿಖಾನ್ ಕೊಲೆ (Liaquat Ali Khan murder) ಪ್ರಕರಣಕ್ಕೆ ತಿರುವು ಸಿಕ್ಕಿದೆ.ಇದೇ ಕಾರಣಕ್ಕೆ ಲಿಯಾಖತ್ ಅಲಿಖಾನ್ ಕೊಲೆಯಾಗಿದ್ದಾನೆ.

ಫೆ.28ರಂದು ಲಿಯಾಖತ್ ಅಲಿಖಾನ್ (44) ರಾತ್ರಿ ಜಿಮ್‌ಗೆ ಹೋಗಿದ್ದವನು ನಾಪತ್ತೆಯಾಗಿದ್ದ, ಕುಟುಂಬಸ್ಥರಿಂದ ಹುಡುಕಾಟ ನಡೆಸಿದಾಗ ಬೆಳಗಿನ ಜಾವ ಸಮೀಪದ ಒಂದು ಮನೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ, ಕಳೆದ ಎರಡು ವರ್ಷಗಳಿಂದ ಆರೋಪಿ ಇಲಿಯಾಸ್ ಜೊತೆಗೆ ಲಿಯಾಖತ್‌ ಅಲಿಖಾನ್‌ ಹೋಮೋ ಸೆಕ್ಸ್‌ ಸಂಬಂಧದಲ್ಲಿದ್ದ ಎನ್ನುವುದು ಬಹಿರಂಗವಾಗಿದೆ.

ಕೊಲೆಯಾದ ಎರಡು ದಿನಗಳ ಹಿಂದಷ್ಟೇ ಲಿಯಾಖತ್‌ ಎರಡನೇ ಮದುವೆಯಾಗಿದ್ದ. ಆದರೆ, ಲಿಯಾಖತ್‌ ಜತೆ ಹೋಮೋ ಸೆಕ್ಸ್‌ನಲ್ಲಿದ್ದ ಕಾರಣದಿಂದಾಗಿ ಇಲಿಯಾಸ್‌ ತನ್ನ ನಿಶ್ಚಿತಾರ್ಥವನ್ನು ರದ್ದು ಮಾಡಿದ್ದ.

ತಮ್ಮ ಭವಿಷ್ಯದ ಬಗ್ಗೆ ಇಬ್ಬರ ನಡುವೆಯೇ ಜಗಳವಾಗಿದೆ.ಜಗಳ ತಾರಕ್ಕಕ್ಕೇರಿ ಬಳಿಕ ಇಲಿಯಾಸ್ ಲಿಯಾಖತ್‌ ಗೆ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ಕೆಳಕ್ಕೆ ಬಿದ್ದ ಬಳಿಕ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆ ಬಳಿಕ ಇಲ್ಯಾಸ್ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಕೂಡ ಯತ್ನಿಸಿದ್ದ.

ಇದೀಗ ಕೊಲೆ ಪ್ರಕರಣದ ಕಾರಣ ಬಹಿರಂಗವಾಗಿದ್ದು ,ಹೋಮೋ ಸೆಕ್ಸ್‌ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ.

You may also like

Leave a Comment