Home » Dog Bite: ತಮಿಳುನಾಡಿನಲ್ಲಿ 3 ತಿಂಗಳಲ್ಲಿ 1.24 ಲಕ್ಷ ನಾಯಿ ಕಡಿತ ಪ್ರಕರಣ – ಕಾರಣ ಏನು?

Dog Bite: ತಮಿಳುನಾಡಿನಲ್ಲಿ 3 ತಿಂಗಳಲ್ಲಿ 1.24 ಲಕ್ಷ ನಾಯಿ ಕಡಿತ ಪ್ರಕರಣ – ಕಾರಣ ಏನು?

0 comments

Dog Bite: ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ತಮಿಳುನಾಡು ಭಾರತದಲ್ಲಿ ಮೂರನೇ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳನ್ನು ದಾಖಲಿಸಿದೆ. ತಮಿಳುನಾಡಿನಲ್ಲಿ 2025ರ ಮೊದಲ 3 ತಿಂಗಳಲ್ಲಿ 1.24 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. 2024ರಲ್ಲಿ ಒಟ್ಟು 4.8 ಲಕ್ಷ ನಾಯಿ ಕಡಿತದ ಘಟನೆಗಳು ಮತ್ತು ರೇಬೀಸ್‌ನಿಂದ 47 ಸಾವು ಸಂಭವಿಸಿದೆ ಎಂದು ವರದಿ ಹೇಳಿದೆ.

ನಗರ ಪ್ರದೇಶ ಅತ್ಯಂತ ನಿರ್ಲಕ್ಷ್ಯದಿಂದ ಕೂಡಿದೆ. ಹೆಚ್ಚುತ್ತಿರುವ ತಾಪಮಾನ, ನಿಯಮ ಪಾಲನೆ ಮಾಡದೆ ಇರುವುದು ಈ ವೈಫಲ್ಯಕ್ಕೆ ಪ್ರಮುಖ ಅಂಶಗಳಾಗಿವೆ ಎಂದು ತಜ್ಞರು ಉಲ್ಲೇಖಿಸುತ್ತಾರೆ. ತುಂಬಿ ತುಳುಕುತ್ತಿರುವ ಡಂಪಿಂಗ್ ಯಾರ್ಡ್‌ಗಳು, ತೆರೆದ ಡಂಪಿಂಗ್ ಯಾರ್ಡ್‌ಗಳು, ಅನಿಯಮಿತ ಕಸ ಸಂಗ್ರಹಣೆಯು ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಆಕರ್ಷಕ ಸ್ಥಳಗಳಾಗಿ ಮಾರ್ಪಟ್ಟಿವೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

“ನಾವು ಪ್ರತಿ ಬೀದಿ ಮೂಲೆಗಳಲ್ಲಿ ಕನಿಷ್ಠ ಒಂದು ಡಜನ್ ಬೀದಿ ನಾಯಿಗಳನ್ನು ನೋಡುತ್ತೇವೆ ಮತ್ತು ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ” ಎಂದು ಚೆನ್ನೈನ ಇಂದಿರಾ ನಗರದ ನಿವಾಸಿಯೊಬ್ಬರು ಹೇಳಿದ್ದಾರೆ. “ಹೆಚ್ಚಿನ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ. ನಾಯಿಗಳ ಹಾವಳಿಯಿಂದಾಗಿ ರಾತ್ರಿ ಓಡಾಡಲು ನಮಗೆ ಭಯ ಉಂಟಾಗುತ್ತದೆ, ಮತ್ತು ಅವುಗಳ ಜೋರಾಗಿ ಬೊಗಳುವುದರಿಂದ ರಾತ್ರಿ ನಿದ್ರೆ ಮಾಡಲು ಕಷ್ಟವಾಗುತ್ತಿದೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: Ramayana: ‘ರಾಮಾಯಣ’ ಸಿನಿಮಾದ ಮೊದಲ ಟೀಸರ್ ಬಿಡುಗಡೆ – ರಾವಣನಾಗಿ ಕಾಣಿಸಿಕೊಂಡ ಯಶ್ ಗೆಟಪ್ ರಿವೀಲ್

You may also like