Home » Financial rules: ಅಕ್ಟೋಬರ್ ತಿಂಗಳಿಂದ ದೇಶದಲ್ಲಿ ಅಸ್ತಿತ್ವಕ್ಕೆ ಬರಲಿವೆ 10 ಹೊಸ ನಿಯಮಗಳು!

Financial rules: ಅಕ್ಟೋಬರ್ ತಿಂಗಳಿಂದ ದೇಶದಲ್ಲಿ ಅಸ್ತಿತ್ವಕ್ಕೆ ಬರಲಿವೆ 10 ಹೊಸ ನಿಯಮಗಳು!

1 comment

Financial rules: ಅಕ್ಟೋಬರ್ ತಿಂಗಳಿಂದ ದೇಶದಲ್ಲಿ 10 ಹೊಸ ನಿಯಮಗಳು (Financial rules) ಅಸ್ತಿತ್ವಕ್ಕೆ ಬರಲಿದ್ದು, ಸಾಮಾನ್ಯ ಜನರು ಬದಲಾಗುತ್ತಿರುವ ಮತ್ತು ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಅಕ್ಟೋಬರ್ 1ರಿಂದ ಬದಲಾಗುವ ಮತ್ತು ಜಾರಿಗೆ ಬರುವ ಹಣಕಾಸಿಗೆ ಸಂಬಂಧಿಸಿದ ನಿಯಮಗಳು ನೇರ ಅಥವಾ ಪರೋಕ್ಷವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತವೆ. ಯಾವೆಲ್ಲ ನಿಯಮಗಳು ಬದಲಾಗಲಿವೆ ಎಂದು ಇಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 1ರಿಂದ ಜಿಎಸ್‌ಟಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಯಮ ನೇರವಾಗಿ ವ್ಯಾಪಾರಿ

ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಕೆಲವು ವಸ್ತುಗಳ ಬೆಲೆಯುಲ್ಲಿ ವ್ಯತ್ಯಾಸ ಉಂಟಾಗುತ್ತದೆ.

ದಿನಬಳಕೆಗೆ ಅತೀ ಮುಖ್ಯವಾಗಿರುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಅಕ್ಟೋಬರ್ 1ರಿಂದ ಎಲ್‌ಪಿಜಿಯ ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳು ಬದಲಾಗುತ್ತವೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಅಕ್ಟೋಬರ್ 1ರಿಂದ ಕೆಲವು ಬದಲಾವಣೆಯಾಗಲಿದ್ದು, ಬಡ್ಡಿದರ ಹೆಚ್ಚು ಅಥವಾ ಕಡಿಮೆಯಾಗುವ ಸಾಧ್ಯತೆಗಳಿವೆ.

ಇನ್ನು ಅಕ್ಟೋಬರ್ 1ರಿಂದ ಪಿಪಿಎಫ್ ನಿಯಮಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಅಂದರೆ ಬಡ್ಡಿದರ ಏರಿಕೆ/ಇಳಿಕೆ ಸಹ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

ಸಿಮ್ ಖರೀದಿ ಮತ್ತು ಟೆಲಿಕಾಂ ನಿಯಮಗಳಲ್ಲಿ ಭಾರೀ ಬದಲಾವಣೆ ಆಗಲಿದೆ. ಟೆಲಿಕಾಂ ಕಂಪನಿಗಳಿ ಎಲ್ಲಿ, ಯಾವ ಸೇವೆ ನೀಡುತ್ತಿವೆ ಎಂಬ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸುವಂತೆ ಟ್ರಾಯ್ ಆದೇಶಿಸಿದೆ.

ಅದರಲ್ಲೂ ನೀವು ಕ್ರೆಡಿಟ್ ಕಾರ್ಡ್ ಉಪಯೋಗಿಸುತ್ತಿದ್ದರೆ ಅಕ್ಟೋಬರ್ 1ರಿಂದ ಬದಲಾಗುವ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಬ್ಯಾಂಕ್‌ಗಳು ಬಡ್ಡಿದರ ಮತ್ತು ಶುಲ್ಕದಲ್ಲಿ ಆಗಾಗ್ಗೆ ಹೆಚ್ಚು ಕಡಿಮೆ ಆಗುತ್ತದೆ.

ಅಕ್ಟೋಬರ್ 1ರಿಂದ ಯುಪಿಐ ವಹಿವಾಟಿನ ಮೇಲೆ ಕೆಲ ಹೊಸ ನಿಯಮಗಳು ಅನ್ವಯವಾಗುವ ಸಾಧ್ಯತೆಗಳಿವೆ. ದೊಡ್ಡ ಮೊತ್ತದ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುವ ಸಾಧ್ಯತೆಗಳಿವೆ.

ಇನ್ನು ಆಧಾರ್ ಕಾರ್ಡ್ ಕೆವೈಸಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್‌ ನ ಕೆಲವು ನಿಯಮಗಳು ಅಕ್ಟೋಬರ್ 1ರಿಂದ ಹೊಸ ನಿಯಮಗಳು ಅನ್ವಯವಾಗಲಿವೆ. ಕೆಲವು ವಿಶೇಷ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕಾಗುತ್ತದೆ.

ಕ್ರೆಡಿಟ್ ಸ್ಟೋರ್ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರುವ ನಿಯಮಗಳ ಬಗ್ಗೆ ತಿಳಿದುಕೊಳ್ಳಿ. ಕ್ರೆಡಿಟ್ ಸ್ಟೋರ್ ಸಾಲ ಪಡೆಯುವ ಮೊತ್ತ, ಬಡ್ಡಿದರ ಮತ್ತು ಶುಲ್ಕದ ಮೇಲೆ ಎಫೆಕ್ಟ್ ಆಗುತ್ತದೆ.

ರಸ್ತೆ ಸುರಕ್ಷಾ ನಿಯಮಗಳ ಅನುಸಾರ ಪರಿಸರ ಸಂರಕ್ಷಣೆ ಹಾಗೂ ಸಂಚಾರಿ ನಿಯಮಗಳಂತೆ ವಾಹನ ನೋಂದಣಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ಬದಲಾವಣೆಯುಂಟಾಗುವ ಸಾಧ್ಯತೆಗಳಿದ್ದು, ಚಾಲಕರು ಮತ್ತು ವಾಗಹನಗಳ ಮಾಲೀಕರ ಮೇಲೆ ಪರಿಣಾಮ ಬೀರಲಿವೆ.

You may also like

Leave a Comment