Home » Karnataka: ರಾಜ್ಯದ 10 ಮಂದಿ ಸಾಹಿತಿಗಳಿಗೆ 2024 ರ ‘ಸಾಹಿತ್ಯಶ್ರೀ’ ಪ್ರಶಸ್ತಿ ಘೋಷಣೆ

Karnataka: ರಾಜ್ಯದ 10 ಮಂದಿ ಸಾಹಿತಿಗಳಿಗೆ 2024 ರ ‘ಸಾಹಿತ್ಯಶ್ರೀ’ ಪ್ರಶಸ್ತಿ ಘೋಷಣೆ

0 comments

Karnataka: ಕರ್ನಾಟಕದ (Karnataka) 10 ಮಂದಿ ಹಿರಿಯ ಸಾಹಿತಿಗಳಿಗೆ 2024 ರ ಸಾಹಿತ್ಯಶ್ರೀ ಪ್ರಶ್ತಿಯನ್ನು ಘೋಷಣೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ 50 ರಿಂದ 60ರ ವಯೋಮಾನದ ಈ ಕೆಳಕಂಡ 10 ಮಂದಿ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2024ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ನೀಡಲು ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 09-10-2025 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿತು.

ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು, ಪ್ರಶಸ್ತಿಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿದೆ.

1. ಡಾ. ಬಿ.ಎಂ ಪುಟ್ಟಯ್ಯ – ಚಿಕ್ಕಮಗಳೂರು

2. ಡಾ. ಕೆ.ವೈ ನಾರಾಯಣಸ್ವಾಮಿ ಬೆಂಗಳೂರು

3. ಶ್ರೀ ಪದ್ಮಾಲಯ ನಾಗರಾಜ್ ಕೋಲಾರ

4. ಡಾ. ಬಿ.ಯು ಸುಮಾ ತುಮಕೂರು

5. ಡಾ. ಮಮತಾ ಸಾಗರ ಶಿವಮೊಗ್ಗ

6. ಡಾ. ಸಬಿತಾ ಬನ್ನಾಡಿ ಉಡುಪಿ

7. ಶ್ರೀ ಅಬ್ದುಲ್ ಹೈ ತೋರಣಗಲ್ ಬಳ್ಳಾರಿ

8. ಡಾ.ಗುರುಲಿಂಗಪ್ಪ ದಾಬಾಳೆ ಅಕ್ಕಲಕೋಟ

9. ಡಾ.ಎಚ್.ಎಸ್. ಅನುಪಮಾ ಉತ್ತರ ಕನ್ನಡ

10. ಡಾ. ಅಮರೇಶ ಯತಗಲ್ ರಾಯಚೂರು

ಇದನ್ನೂ ಓದಿ;KEA: ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ KEA ಯಿಂದ ಅರ್ಜಿ ಆಹ್ವಾನ!!

You may also like