Home » 100 ಮಹಿಳೆಯರನ್ನು ಕೊಂದು ಶವಗಳನ್ನೇ ರೇಪ್ ಮಾಡಿದ ವಿಕೃತ ಕಾಮಿ!!

100 ಮಹಿಳೆಯರನ್ನು ಕೊಂದು ಶವಗಳನ್ನೇ ರೇಪ್ ಮಾಡಿದ ವಿಕೃತ ಕಾಮಿ!!

0 comments

ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾನೂನನ್ನು ಎಷ್ಟೇ ಕಠಿಣವಾಗಿಸಿದರು ಅತ್ಯಾಚಾರಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಮತ್ತು ಈ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಅದರಂತೆ ಇಲ್ಲೊಬ್ಬ ವ್ಯಕ್ತಿ ಅಂದರೆ ಅತ್ಯಾಚಾರಿ ಶವಗಳನ್ನು ಬಿಡದೆ ಅತ್ಯಾಚಾರ ಮಾಡುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ

ಇಂದೊಂದು ವಿಚಿತ್ರ ಪ್ರಕರಣ. ವ್ಯಕ್ತಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕೊನೆಗೆ ಅವರನ್ನು ಕೊಲ್ಲುತ್ತಿದ್ದ. ಕೊಂದ ಬಳಿಕ ಶವದ ಜೊತೆಗೆ ಮಲಗುತ್ತಿದ್ದ. ಹೀಗೆ ಸುಮಾರು 100 ಮಹಿಳೆಯರ ಶವದ ಜೊತೆಗೆ ಸೆಕ್ಸ್ ಮಾಡಿದ್ದಾನೆ ಎಂದು ಬೆಳಕಿಗೆ ಬಂದಿದೆ. ಯುನೈಟೆಡ್ ಕಿಂಗ್​ಡಂನ ಸಸೆಕ್ಸ್​ನಿಂದ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಡೈಲಿ ಮೇಲ್ ವರದಿ ಪ್ರಕಾರ, ಪುಲ್ಲರ್ ಎಂಬ ವ್ಯಕ್ತಿ ಮಹಿಳೆಯನ್ನು ಕೊಲೆ ಮಾಡಿ ನಂತರ ಶವದ ಜೊತೆಗೆ ಸೆಕ್ಸ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ . ಪುಲ್ಲರ್ ಆಸ್ಪತ್ರೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ

ಪುಲ್ಲರ್ ಮಾಡುತ್ತಿದ್ದ ಕೌರ್ಯ ಕೊನೆಗೂ ಬೆಳಕಿಗೆ ಬಂದಿದೆ. 100 ವರ್ಷದ ಮಹಿಳೆಯರು ಸೇರಿದಂತೆ 9 ವರ್ಷದ ಹುಡುಗಿಯನ್ನು ಕೊಂದು ಈ ರೀತಿ ಕೃತ್ಯವೆಸಗಿರುವುದು ಗೊತ್ತಾಗಿದೆ. ಇಂತಹ ವಿಕೃತ ಮನಸ್ಸಿನ ವ್ಯಕ್ತಿ ಸುಮಾರು 100 ಮಹಿಳೆಯರನ್ನು ಕೊಂದು ಅತ್ಯಾಚಾರ ಮಾಡುತ್ತಿರುವ ಘಟನೆ ಯುನೈಟೆಡ್ ಕಿಂಗ್​ಡಂನ ಜನರನ್ನು ಬೆಚ್ಚಿ ಬೀಳಿಸಿದೆ.

ಪುಲ್ಲರ್ ಟಾರ್ಗೆಟ್ ಮಾಡಿ ಮಹಿಳೆಯರನ್ನು ಕೊಲ್ಲುತ್ತಿದ್ದ. ಆತನ ದಾಖಲೆಯನ್ನಿಟ್ಟುಕೊಂಡು ಟಾರ್ಗೆಟ್ ಮಾಡುತ್ತಿದ್ದ. ಏಕೆಂದರೆ ಆತನ ಡೈರಿಯಲ್ಲಿ ಮಹಿಳೆಯರ ದಾಖಲೆಗಳಿದ್ದವು. ಫೋಟೋ ಮತ್ತು ಅವರ ವಾಸಸ್ಥಳ ಇನ್ನಿತರ ದಾಖಲೆಗಳನ್ನು ಪುಲ್ಲರ್ ಡೈರಿಯಲ್ಲಿ ನಮೂದಿಸಿಟ್ಟಿದ್ದ.

ಪುಲ್ಲರ್ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಮಾಹಿತಿ ತೆಗೆಯುತ್ತಿದ್ದ. ಆದರೀಗ ಪುಲ್ಲರ್​ಗೆ ಮಾಡುತ್ತಿದ್ದ ಔಯಾನಕ ಕೃತ್ಯ ಬೆಳಕಿಗೆ ಬಂದಿದ್ದು, ಸರಿಯಾದ ಶಿಕ್ಷೆ ವಿಧಿಸಲಾಗಿದೆ. 51 ಪ್ರಕರಣಗಳ ತನಿಖೆಯಿಂದ ಆತನಗೆ ಶಿಕ್ಷೆಯಾಗಿದೆ. ಪೊಲೀಸರ ತನಿಖೆಯಂತೆ ಪುಲ್ಲರ್ ಕಂಪ್ಯೂಟರ್​ನಲ್ಲಿ ಲಕ್ಷಾಂತರ ಮಹಿಳೆಯರ ಛಾಯಾಚಿತ್ರಗಳು ಪತ್ತೆಯಾಗಿದೆ.

You may also like

Leave a Comment