Home » Board Exam ಬರೆದು ಗಂಡು ಮಗುವಿಗೆ ಜನ್ಮ ನೀಡಿದ 10th ವಿದ್ಯಾರ್ಥಿನಿ

Board Exam ಬರೆದು ಗಂಡು ಮಗುವಿಗೆ ಜನ್ಮ ನೀಡಿದ 10th ವಿದ್ಯಾರ್ಥಿನಿ

0 comments

Odisha: 10 ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಬೋರ್ಡ್‌ ಪರೀಕ್ಷೆ ಬರೆದ ಕೆಲವೇ ಹೊತ್ತಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಫೆ.24(ಸೋಮವಾರ) ನಡೆದಿದೆ.

ಈ ಘಟನೆಯಿಂದ ಪೋಷಕರ ಜೊತೆಗೆ ಶಾಲಾ ಆಡಳಿತ ಮಂಡಳಿ ಕೂಡಾ ಶಾಕ್‌ಗೊಳಗಾಗಿದ್ದಾರೆ. ವಸತಿ ಶಾಲೆಯಲ್ಲಿದ್ದ ವಿದ್ಯಾರ್ಥಿನಿ ತಾನು ಗರ್ಭಿಣಿ ಎನ್ನುವ ವಿಚಾರವನ್ನು ಮುಚ್ಚಿಟ್ಟಿದ್ದು ಮಗು ಜನ್ಮ ನೀಡುವ ದಿನವೇ ಬೋರ್ಡ್‌ ಪರೀಕ್ಷೆಯನ್ನು ಬರೆದು ಬಂದಿದ್ದಾಳೆ. ಪರೀಕ್ಷೆ ನಂತರ ಸಂಜೆ ಚಿತ್ರಕೊಂಡದಲ್ಲಿರುವ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಶಾಲಾ ಆಡಳಿತ ಮಂಡಳಿಗೆ ವಿಷಯ ಗೊತ್ತಾಗಿ ನಂತರ ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೆ ಇದಕ್ಕೆ ಶಾಲಾ ಆಡಳಿತ ಮಂಡಳಿಯನ್ನೇ ಹೊಣೆ ಮಾಡಿದ್ದಾರೆ. ಇದು ಹಾಸ್ಟೆಲ್‌ ವಾರ್ಡನ್‌ ನಿರ್ಲಕ್ಷ್ಯ ಎಂದು ಪೋಷಕರು ಆರೋಪ ಮಾಡಿದ್ದಾರೆ.

You may also like