Home » Vinay Guruji: RCB ಸಂಭ್ರಮದಲ್ಲಿ 11 ಮಂದಿ ಸಾವನ್ನಪ್ಪಿದ ಪ್ರಕರಣ – ತಪ್ಪು ಯಾರದೆಂದು ತಿಳಿಸಿದ ವಿನಯ್ ಗುರೂಜಿ!!

Vinay Guruji: RCB ಸಂಭ್ರಮದಲ್ಲಿ 11 ಮಂದಿ ಸಾವನ್ನಪ್ಪಿದ ಪ್ರಕರಣ – ತಪ್ಪು ಯಾರದೆಂದು ತಿಳಿಸಿದ ವಿನಯ್ ಗುರೂಜಿ!!

0 comments

Vinay Guruji: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನಸ್ತೋಮ ಸೇರಿದಾಗ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಇದಕ್ಕೆ ಪೊಲೀಸರನ್ನು ಹೊಣೆ ಮಾಡಿ ಅನೇಕ ಅಧಿಕಾರಿಗಳನ್ನು ಅಮಾನತು ಮಾಡಿದೆ. ಆದರೆ ಇದೀಗ ಈ ಬೆನ್ನಲ್ಲೇ ವಿನಯ್ ಗುರೂಜಿ ಅವರು ಈ ಪ್ರಕರಣದ ಮಧ್ಯ ಪ್ರತಿಕ್ರಿಯಿಸಿ ಈ ಘಟನೆಗೆ ಕಾರಣ ಯಾರ ಎಂದು ತಿಳಿಸಿದ್ದಾರೆ.

Bakrid holiday : ಬಕ್ರಿದ್ ಹಬ್ಬಕ್ಕೆ ಎರಡು ದಿನ ರಜೆ ಘೋಷಣೆ- ಕರ್ನಾಟಕದಲ್ಲಿ ರಜೆ ಯಾವಾಗ?

ಹೌದು, ಈ ದುರಂತದ ಕುರಿತು ವಿನಯ್‌ ಗುರೂಜಿ ಪ್ರತಿಕ್ರಿಯಿಸಿದ್ದು, ಇದರಲ್ಲಿ ಎಲ್ಲರ ತಪ್ಪು ಇದೆ ಎಂದಿದ್ದಾರೆ. ಮೊದಲಿಗೆ ಕರ್ನಾಟಕ ಕ್ರಿಕೆಟ್‌ ಬೋರ್ಡ್‌ ಅವರದ್ದೇ ಪ್ರಮುಖ ತಪ್ಪು ಎಂದ ವಿನಯ್‌ ಗುರೂಜಿ ಕ್ರೀಡಾಂಗಣದಲ್ಲಿ ಎಷ್ಟು ಜನರಿಗೆ ಅವಕಾಶ ನೀಡಬಹುದು ಎಂಬುದನ್ನು ನಿರ್ಧರಿಸಿ ತಯಾರಿ ನಡೆಸಿಕೊಳ್ಳಬೇಕಿತ್ತು ಎಂದರು.

ಅಲ್ಲದೇ ಎರಡನೆಯದ್ದಾಗಿ ಅಭಿಮಾನಿಗಳದ್ದು ತಪ್ಪು ಎಂದರು. ಅಭಿಮಾನ ಅತಿರೇಕಕ್ಕೆ ತಿರುಗಿದರೆ ಅಜ್ಞಾನವಾಗುತ್ತೆ, ಕಪ್‌ ವಾಪಸ್‌ ಪಡೆಯಬಹುದು ಆದರೆ ಪ್ರಾಣ ವಾಪಸ್‌ ಬರುವುದಿಲ್ಲ, ಅಭಿಮಾನದಲ್ಲಿ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು, ಅಭಿಮಾನ ಅವಿವೇಕವಾಗಬಾರದು ಎಂದು ವಿನಯ್‌ ಗುರೂಜಿ ಹೇಳಿದರು.

Elephant Meet: ಆನೆಗಳನ್ನು ಕೊಂದು ಜನರಿಗೆ ಮಾಂಸ ಹಂಚಲು ಮುಂದಾದ ಸರ್ಕಾರ !! ಕಾರಣ ನಿಜಕ್ಕೂ ಅಚ್ಚರಿ

You may also like