Home » Home ಹೊಸ ಕನ್ನಡ » ವೇಣೂರು ಐಟಿಐಯಲ್ಲಿ 110 ಯುನಿಟ್ ರಕ್ತದಾನ ಹಾಗೂ ಸನ್ಮಾನ ಕಾರ್ಯಕ್ರಮ

ವೇಣೂರು ಐಟಿಐಯಲ್ಲಿ 110 ಯುನಿಟ್ ರಕ್ತದಾನ ಹಾಗೂ ಸನ್ಮಾನ ಕಾರ್ಯಕ್ರಮ

A+A-
Reset

ವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟೀಯ ಸೇವಾ ಯೋಜನೆ ಘಟಕದ ವತಿಯಿಂದ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ, ಹಳೆ ವಿದ್ಯಾರ್ಥಿ ಸಂಘ ಎಸ್ ಡಿ ಎಂ ಐ ಟಿ ಐ, ಮಂಜುಶ್ರೀ ರೋವರ್ಸ್ ಘಟಕ, ಪದ್ಮಾಂಬ ಸಮೂಹ ಸಂಸ್ಥೆಗಳು, ವೇಣೂರು, ಹಾಲು ಉತ್ಪಾದಕರ ಸಹಕಾರಿ ಸಂಘ, ಕುಕ್ಕೇಡಿ. ಕುಕ್ಕೇಡಿ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ವೇಣೂರು, ಲಯನ್ಸ್ ಕ್ಲಬ್ ಮಂಗಳೂರುಮೆಟ್ರೋ ಗೋಲ್ಡ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು, ಪಲ್ಗುಣಿ ಸೇವಾ ಸಂಘ[ರಿ] ವೇಣೂರು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್, ದ.ಕ. ಉಡುಪಿ ಜಿಲ್ಲೆ, ಬೆಳ್ತಂಗಡಿ ವಲಯ, ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು, ದೇವಾಡಿಗರ ಸೇವಾ ವೇದಿಕೆ ರಿ. ವೇಣೂರು ಮುಂತಾದ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ರಕ್ತದಾನದ ಬೃಹತ್ ಶಿಬಿರ ವೇಣೂರು ಐಟಿಐಯಲ್ಲಿ ನಡೆಯಿತು. ಪಲ್ಗುಣಿ ಸೇವಾ ಸಂಘ ರಿ. ವೇಣೂರು ಇದರ ಅಧ್ಯಕ್ಷರಾದ ಶ್ರೀ ವಿ ಎಸ್ ಜಯರಾಜ್ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ರಕ್ತದಾನ ಅತ್ಯಂತ ಶ್ರೇಷ್ಠ ದಾನ ಇದರಿಂದ ಹಲವಾರು ಜೀವ ಉಳಿಸಿದಂತಹ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು. ಸಮಾರಂಭದಲ್ಲಿ ವೇಣೂರು ನಮನ ಕ್ಲಿನಿಕ್ ನ ಖ್ಯಾತ ವೈದ್ಯರಾದ ಡಾ ಶಾಂತಿಪ್ರಸಾದ್ ರವರಿಗೆ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಪುರಸ್ಕರಿಸಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಶಾಂತಿ ಪ್ರಸಾದ್ ರವರು ಅಸಂಖ್ಯಾತ ಬಡ ಜನರಿಗೆ ಮಿತ ದರದಲ್ಲಿ ತಪಾಸಣೆಯನ್ನು ಮಾಡಿ ಅವರನ್ನು ಆರೈಕೆ ಮಾಡಿದ ತೃಪ್ತಿ ನನಗೆ ಇದ್ದು ಇನ್ನಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗುವಂತೆ ಪ್ರೇರಣೆ ನೀಡಿದೆ ಎಂದು ಹೇಳುತ್ತಾ ಸಂಸ್ಥೆಯಲ್ಲಿ ಮಾಡಿದ ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು

ಮುಖ್ಯ ಅತಿಥಿಗಳಾಗಿ ಮಂಗಳೂರು ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ನ ಲ| ಕೆ ಎಸ್ ಉಪಾಧ್ಯಾಯ ಮಾತನಾಡುತ್ತಾ ಈ ಸಂಸ್ಥೆಯಲ್ಲಿ ಆಯೋಜಿಸಿರುವಂತಹ ರಕ್ತದಾನ ಶಿಬಿರ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು. ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರೂ ಆಗಿರುವ ಶ್ರೀ ಜಿನರಾಜ್ ಜೈನ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ಇದರ ಅಧ್ಯಕ್ಷರಾದ ಲ| ಮನೋಜ್ ಚಂದ್ರ ಶೆಟ್ಟಿ, ಭಾರತೀಯ ಜೀವ ವಿಮಾ ನಿಗಮ ದ ಪ್ರತಿನಿಧಿ ಶ್ರೀ ಜಗನ್ನಾಥ ದೇವಾಡಿಗ, ಲ| ಎಂ ಜೆ ನಾಗೇಶ್ ಎಂಜೆಎಫ್ ಜಿಲ್ಲಾ ಸಂಯೋಜಕರು ಲಯನ್ಸ್ ಕ್ಲಬ್ ಮಂಗಳೂರು ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದ ಐಟಿಐ ಪ್ರಾಚಾರ್ಯರಾದ ಶ್ರೀ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಮಾತನಾಡಿ ವಿದ್ಯಾರ್ಥಿ ದಿಸೆಯಿಂದಲೇ ದಾನದ ಮಹತ್ವವನ್ನು ಅರಿತು ರಕ್ತದಾನದಂತಹ ಶ್ರೇಷ್ಠ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಸಮಾಜದ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು.

ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ: ಶತ್ರೂಪ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿತಾ ಕೆ. ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಧೀರ್ ಕುಮಾರ್ , ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ನಿರ್ಮಲ್‌ಕುಮಾರ್ ಬೊಳ್ಜಾಲ್ ಗುತ್ತು, ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು, ಇದರ ಅಧ್ಯಕ್ಷರಾದ ಎನ್ ಆನಂದ, ವೇಣೂರು ದೇವಾಡಿಗರ ಸೇವಾ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ಸುಂದರ ಎಂ ದೇವಾಡಿಗ, ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಶ್ರೀ ರವಿ ನಾರಾವಿ, ಮಂಗಳೂರು ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ನ ಕಾರ್ಯದರ್ಶಿ ಲ! ವೆಂಕಟೇಶ್ ಬಾಯರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಗುಣವತಿ ಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 110 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ವಿದ್ಯಾರ್ಥಿ ಕು ಪ್ರಭಾ ಪ್ರಾರ್ಥಿಸಿದ ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪದ್ಮಪ್ರಸಾದ್ ಬಸ್ತಿ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಶ್ರವಣ್ ಕುಮಾರ್ ವಂದಿಸಿದ ಈ ಕಾರ್ಯಕ್ರಮವನ್ನು ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಸತೀಶ್ ನಿರ್ವಹಿಸಿದರು.