Home » Navadehali:119 ಚೀನಾ ಮೊಬೈಲ್ ಆಪ್ಸ್ ಬ್ಯಾನ್: ಕೇಂದ್ರ ಸರ್ಕಾರದ ನಿರ್ಧಾರ!

Navadehali:119 ಚೀನಾ ಮೊಬೈಲ್ ಆಪ್ಸ್ ಬ್ಯಾನ್: ಕೇಂದ್ರ ಸರ್ಕಾರದ ನಿರ್ಧಾರ!

by ಕಾವ್ಯ ವಾಣಿ
0 comments

Navadehali: ಕೇಂದ್ರ ಸರ್ಕಾರ ಮತ್ತೊಮ್ಮೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ಡಿಜಿಟಲ್ ದಾಳಿ ನಡೆಸಿದೆ. ಹೌದು, ಕೇಂದ್ರ ಸರ್ಕಾರವು 119 ಚೀನೀ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಏಕಕಾಲದಲ್ಲಿ ನಿಷೇಧಿಸಿದೆ. ತೆಗೆದುಹಾಕಲಾದ ಅಪ್ಲಿಕೇಶನ್‌ಗಳು ಮುಖ್ಯವಾಗಿ ವಿಡಿಯೋ ಮತ್ತು ವಾಯ್ಸ್ ಚಾಟ್ ಪ್ಲಾಟ್‌ಫಾರ್ಮ್ಗಳನ್ನು ಒಳಗೊಂಡಿವೆ.

ಐಟಿ ಕಾಯ್ದೆಯ ಸೆಕ್ಷನ್ 69o ಅಡಿಯಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಸರ್ಕಾರ ಆದೇಶಿಸಿದೆ. ಸಿಂಗಾಪುರ, ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾದ ಕೆಲವು ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಆಧಾರದ ಮೇಲೆ ಆನ್‌ಲೈನ್ ವಿಷಯಗಳಿಗೆ ಪ್ರವೇಶವನ್ನು ನಿಷೇಧಿಸುವ ಅಧಿಕಾರವನ್ನು ಐಟಿ ಕಾಯ್ದೆಯ ಸೆಕ್ಷನ್ 69o ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

You may also like