Home » Ballari: SSLC ಫಲಿತಾಂಶದಲ್ಲಿ ಕನ್ನಡದಲ್ಲಿ 13 ಅಂಕ, ಮರು ಎಣಿಕೆಯಲ್ಲಿ 73 ಅಂಕ

Ballari: SSLC ಫಲಿತಾಂಶದಲ್ಲಿ ಕನ್ನಡದಲ್ಲಿ 13 ಅಂಕ, ಮರು ಎಣಿಕೆಯಲ್ಲಿ 73 ಅಂಕ

0 comments
SSLC

Ballari: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಾದ ಕನ್ನಡದಲ್ಲಿ 13 ಅಂಕ ಪಡೆದಿದ್ದ ತೆಕ್ಕಲಕೋಟೆ ಹೋಬಳಿಯ ಕರೂರು ಗ್ರಾಮದ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯ ವಿದ್ಯಾರ್ಥಿನಿ ವೀರನಿಖಿತಾಂಜಲಿ ಮರು ಎಣಿಕೆಯ ನಂತರ 73 ಅಂಕ ಪಡೆದಿರುವ ಘಟನೆ ನಡೆದಿದೆ.

ಕನ್ನಡದಲ್ಲಿ ಕಡಿಮೆ ಅಂಕ ಪಡೆದ ಕಾರಣ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿ ಮರುಎಣಿಕೆಯ ನಂತರ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣವಾಗಿದ್ದು, ಈ ಫಲಿತಾಂಶದಿಂದ ಶಾಲೆಯ 40ಕ್ಕೆ 40 ವಿದ್ಯಾರ್ಥಿಗಳು ಉತ್ತೀರ್ಣವಾದಂತೆ ಆಗಿದೆ ಎಂದು ಶಾಲೆಯ ಪ್ರಾಂಶುಪಾಲ ಖಾಸಿ ಸಾಹೇಬ್‌ ಹೇಳಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

You may also like